ಮಜೌಲಿ (ಅಸ್ಸೋಂ):ಮಜೌಲಿಯಲ್ಲಿ ಬುಧವಾರ ಸಂಜೆ ಹೃದಯಾಘಾತವಾಗಿ ಬಾಲ ಕಲಾವಿದೆ ಸಾವನ್ನಪ್ಪಿದ್ದಾರೆ. ಈ ದುರದೃಷ್ಟಕರ ಮತ್ತು ಅಕಾಲಿಕ ಮರಣವು ದ್ವೀಪದ ಜನರನ್ನು ದುಃಖಿತರನ್ನಾಗಿಸಿದೆ. ಮಜೌಲಿ ದ್ವೀಪದ ಆರೋಗ್ಯ ಕ್ಷೇತ್ರದಲ್ಲಿನ ಕಳಪೆ ಮೂಲಸೌಕರ್ಯಗಳ ಬಗ್ಗೆ ಸರ್ಕಾರ ನಿರಾಸಕ್ತಿ ವಹಿಸಿದೆ ಎಂದು ಜನರು ಆರೋಪಿಸಿ ಆಕ್ರೋಶಗೊಂಡಿದ್ದಾರೆ.
ಮಜೌಲಿಯ ಜನಪ್ರಿಯ ಗಾಯಕಿ ತೇಜಸ್ವಿತಾ ಬೋರಾ (14) ಮೃತ ಬಾಲಕಿ. ಮಜೌಲಿಯಲ್ಲಿ ನಡೆದ ಸಂಕರ್ದೇವ್ ಜಯಂತಿ ಉತ್ಸವದಲ್ಲಿ ತಮ್ಮ ಪ್ರದರ್ಶನಕ್ಕೂ ಮೊದಲು ತೀವ್ರ ಹೃದಯಾಘಾತಕ್ಕೆ ಒಳಗಾದರು. ಉತ್ಸವದ ಸ್ಥಳದಲ್ಲಿ ಆಕ್ಸಿಜನ್ ಸಿಲಿಂಡರ್‌ಗಳು ಲಭ್ಯವಿಲ್ಲದ ಹಿನ್ನೆಲೆ ಆಕೆಯನ್ನು ತಕ್ಷಣವೇ ಗೋರ್ಮುರ್‌ನಲ್ಲಿರುವ ಶ್ರೀ ಪಿತಾಂಬರ ದೇವ ಗೋಸ್ವಾಮಿ ಜಿಲ್ಲಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು.
ಮತ್ತೊಂದೆಡೆ, ದ್ವೀಪದಿಂದ ರಾತ್ರಿ ದೋಣಿ ಸೇವೆ ಇಲ್ಲದ ಕಾರಣ ರೋಗಿಯನ್ನು ಜೋರ್ಹತ್ ಅಥವಾ ಲಖಿಂಪುರಕ್ಕೆ ಸ್ಥಳಾಂತರಿಸಲು ಸಾಧ್ಯವಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತೇಜಸ್ವಿತಾಳನ್ನು ಆಸ್ಪತ್ರೆಯಲ್ಲಿ ಎರಡು ಗಂಟೆಗಳ ಕಾಲ ಯಾರೂ ಗಮನಿಸದ ಹಿನ್ನೆಲೆ ಬಾಲಕಿ ಕೊನೆಯುಸಿರೆಳೆದಳು ಎಂದು ಆರೋಪಿಸಲಾಗಿದೆ.