ಕರ್ನಾಟಕ

karnataka

ETV Bharat / entertainment

ಕಪಾಳಮೋಕ್ಷ ಪ್ರಕರಣ.. ವಿಲ್​ಸ್ಮಿತ್​ಗೆ ಆಸ್ಕರ್​ನಿಂದ 10 ವರ್ಷ ನಿಷೇಧ - ಪತ್ನಿ ಜಡಾ ಪಿಂಕೆಟ್ ಬಗ್ಗೆ ಕ್ರಿಸ್​ ರಾಕ್ ಗೇಲಿ

ಹಾಸ್ಯನಟ ಕ್ರಿಸ್ ರಾಕ್​ಗೆ ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿವುಡ್ ನಟ ವಿಲ್​ಸ್ಮಿತ್ ಅವರನ್ನು 10 ವರ್ಷಗಳ ಕಾಲ ಅಕಾಡೆಮಿಯ ಎಲ್ಲಾ ಈವೆಂಟ್‌ಗಳಿಗೆ ನಿಷೇಧ ಮಾಡಲು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ನಿರ್ಧರಿಸಿದೆ.

Will Smith banned from Oscars for 10 years
ವಿಲ್​ಸ್ಮಿತ್​ಗೆ ಆಸ್ಕರ್​ನಿಂದ 10 ವರ್ಷ ಬ್ಯಾನ್: ಅಕಾಡೆಮಿ ನಿರ್ಧಾರ

By

Published : Apr 9, 2022, 7:03 AM IST

ಲಾಸ್ ಏಂಜಲೀಸ್(ಅಮೆರಿಕ): ಆಸ್ಕರ್-2022ರ ಕಾರ್ಯಕ್ರಮದಲ್ಲಿ ಹಾಸ್ಯನಟ ಕ್ರಿಸ್ ರಾಕ್​ಗೆ ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿವುಡ್ ನಟ ವಿಲ್​ಸ್ಮಿತ್ ಅವರನ್ನು 10 ವರ್ಷಗಳ ಕಾಲ ಅಕಾಡೆಮಿಯ ಎಲ್ಲಾ ಈವೆಂಟ್‌ಗಳಿಗೆ ನಿಷೇಧಿಸಲು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸಸ್​ನ ಆಡಳಿತ ಮಂಡಳಿ ನಿರ್ಧಾರ ಮಾಡಿದೆ. ಈ ಕುರಿತು ಅಕಾಡೆಮಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.

'ವಿಲ್ ಸ್ಮಿತ್ ಅವರ ರಾಜೀನಾಮೆಯನ್ನು ಅಂಗೀಕರಿಸುವುದರ ಜೊತೆಗೆ, ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಲ್ ಸ್ಮಿತ್ ನಡೆದುಕೊಂಡ ರೀತಿಗೆ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಎಂದು ಚರ್ಚಿಸಲು ಆಡಳಿತ ಮಂಡಳಿಯು ಸಭೆಯನ್ನು ಕರೆದಿದೆ. ಇದರೊಂದಿಗೆ ಏಪ್ರಿಲ್ 8 ರಿಂದ 10 ವರ್ಷಗಳ ಅವಧಿಗೆ ವಿಲ್​ಸ್ಮಿತ್ ಅವರನ್ನು ಅಕಾಡೆಮಿ ನಿಷೇಧ ಮಾಡಿದೆ. ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭಗಳನ್ನು ಒಳಗೊಂಡಂತೆ ಯಾವುದೇ ಅಕಾಡೆಮಿ ಕಾರ್ಯಕ್ರಮಗಳಿಗೆ ಹಾಜರಾಗಲು ಸ್ಮಿತ್‌ಗೆ ಅನುಮತಿ ನೀಡಲಾಗುವುದಿಲ್ಲ' ಎಂದು ಅಕಾಡೆಮಿ ಅಧ್ಯಕ್ಷ ಡೇವಿಡ್ ರೂಬಿನ್ ಮತ್ತು ಸಿಇಒ ಡಾನ್ ಹಡ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಲಾಸ್ ಏಂಜಲೀಸ್‌ನಲ್ಲಿ ಶುಕ್ರವಾರ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆರಂಭದಲ್ಲಿ ಈ ಸಭೆಯನ್ನು ಏಪ್ರಿಲ್ 18ರಂದು ನಿಗದಿ ಮಾಡಲಾಗಿತ್ತು. ಆದರೆ ಕಳೆದ ವಾರ ವಿಲ್​ಸ್ಮಿತ್ ರಾಜೀನಾಮೆ ಘೋಷಿಸಿದ ನಂತರ, ಸಭೆಯನ್ನು ಶುಕ್ರವಾರವೇ ನಡೆಸಲಾಗಿದೆ ಎಂದು ಸಿಎನ್​ಎನ್​ ವರದಿ ಮಾಡಿದೆ. 94ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿಂದಿನ ವರ್ಷ ಸಿನಿಮಾಗೆ ಅದ್ಭುತವಾಗಿ ಕೆಲಸ ಮಾಡಿದವರ ಸಾಧನೆಯನ್ನು ಸಂಭ್ರಮಿಸಬೇಕಿತ್ತು. ಆದರೆ ವಿಲ್​ಸ್ಮಿತ್ ವೇದಿಕೆಯಲ್ಲಿ ನಡೆದುಕೊಂಡ ರೀತಿಯಿಂದಾಗಿ ಸಂಭ್ರಮದ ಕ್ಷಣಗಳು ಮರೆಯಾಗಿವೆ. ಅವರ ನಡವಳಿಕೆಗಳು ಖಂಡಿತಾ ಸ್ವೀಕಾರಾರ್ಹವಲ್ಲ ಎಂದು ಅಕಾಡೆಮಿ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ:ಆಸ್ಕರ್​ ವೇದಿಕೆಯಲ್ಲಿ ಕಪಾಳಮೋಕ್ಷ ಪ್ರಕರಣ.. ಅಕಾಡೆಮಿ ಸದಸ್ಯತ್ವಕ್ಕೆ ವಿಲ್ ಸ್ಮಿತ್​ ರಾಜೀನಾಮೆ

ABOUT THE AUTHOR

...view details