ಕರ್ನಾಟಕ

karnataka

ETV Bharat / entertainment

ಮುಂಬೈ ಏರ್​ಪೋರ್ಟ್​​ನಲ್ಲಿ ಸಿಂಪಲ್​​ ಆಗಿ ಕಾಣಿಸಿಕೊಂಡ ವಿರುಷ್ಕಾ.. - ಮುಂಬೈನಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಿ-ಟೌನ್‌ನಲ್ಲಿ ಮುದ್ದಾದ ಮತ್ತು ಕ್ಲಾಸಿಸ್ಟ್ ಜೋಡಿಗಳಲ್ಲಿ ಒಬ್ಬರು. ಇಬ್ಬರೂ ಸೆಲೆಬ್ರಿಟಿಗಳು ಕೆಲಸದಿಂದ ಬಿಡುವು ಸಿಕ್ಕ ಬಳಿಕ ಒಟ್ಟಿಗೆ ಸಮಯ ಕಳೆಯುವುದನ್ನು ಇಷ್ಟಪಡುತ್ತಾರೆ. ಇದು ಅವರ ಅಭಿಮಾನಿಗಳಿಗೆ ತುಂಬಾ ಸಂತೋಷ ನೀಡುತ್ತದೆ. ವಿರಾಟ್ ಮತ್ತು ಅನುಷ್ಕಾ ಮತ್ತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಅವರ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

Virat Kohli and Anushka Sharma casual airport look, Virat Kohli and Anushka Sharma in mumbai, Virat Kohli and Anushka Sharma news, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಕ್ಯಾಶುಯಲ್ ಏರ್‌ಪೋರ್ಟ್ ಲುಕ್, ಮುಂಬೈನಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸುದ್ದಿ,
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ

By

Published : Jun 9, 2022, 9:17 AM IST

ಮುಂಬೈ: ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಪ್ರತಿಯೊಂದು ಸಣ್ಣ ವಿಷಯವೂ ವೈರಲ್ ಆಗಿರುವುದನ್ನು ನೋಡಿ ಅವರ ಅಭಿಮಾನಿಗಳ ಅನುಸರಣೆ ಮಾಡ್ತಾರೆ. ಅವರ ಚಿತ್ರಗಳು ಮತ್ತು ವಿಡಿಯೋಗಳನ್ನು ನೋಡಲು ಅವರ ಅಭಿಮಾನಿಗಳು ಯಾವಾಗಲೂ ತುಂಬಾ ಉತ್ಸುಕರಾಗಿರುತ್ತಾರೆ. ಬುಧವಾರ ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಇಬ್ಬರೂ ಒಬ್ಬರ ಕೈ ಹಿಡಿದುಕೊಂಡು ಹೋಗುತ್ತಿದ್ದು ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಇದನ್ನು ಮೆಚ್ಚಿಕೊಂಡಿದ್ದಾರೆ.

ಮುಂಬೈ ಏರ್​ಪೋರ್ಟ್​​ನಲ್ಲಿ ಸಿಂಪಲ್​​ ಆಗಿ ಕಾಣಿಸಿಕೊಂಡ ವಿರುಷ್ಕಾ

ಕ್ಯಾಶುಯಲ್ ಶೈಲಿಯಲ್ಲಿ ಕಾಣಿಸಿಕೊಂಡ ಲವ್ಲಿ ಜೋಡಿ: ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ವಿರುಷ್ಕಾ ಬಹಳ ಸಿಂಪಲ್​ ಆಗಿ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಅನುಷ್ಕಾ ಶರ್ಮಾ ಹಸಿರು ಬ್ಯಾಗಿ ಶರ್ಟ್ ಮತ್ತು ಒಂದು ಬದಿಯಲ್ಲಿ ನೀಲಿ ಡೆನಿಮ್ ಶಾರ್ಟ್ ಸ್ಕರ್ಟ್ ಧರಿಸಿರುವುದನ್ನು ಕಾಣಬಹುದು. ಪೋನಿಟೇಲ್, ಬಿಳಿ ಸ್ಟಡ್‌ಗಳನ್ನು ಧರಿಸಿರುವ ಅನುಷ್ಕಾ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ.

ಓದಿ:ಚಿತ್ರರಂಗದಲ್ಲಿ ಗೆದ್ದ ಕಮಲ್ ಹಾಸನ್ 'ವಿಕ್ರಮ್​​'.. ನಿರ್ದೇಶಕರಿಗೆ ಭರ್ಜರಿ ಕಾರು ಗಿಫ್ಟ್ ನೀಡಿದ ನಟ!

ವಿರಾಟ್ ಕೊಹ್ಲಿ ಬೇಬಿ ಪಿಂಕ್ ಟಿ-ಶರ್ಟ್ ಮತ್ತು ಬಿಳಿ ಪ್ಯಾಂಟ್​​ ಧರಿಸಿದ್ದರು. ಇಬ್ಬರೂ ಒಟ್ಟಿಗೆ ನಗುತ್ತಾ ಕ್ಯಾಮೆರಾಗೆ ಹಲವು ಪೋಸ್ ಕೊಟ್ಟಿದ್ದಾರೆ. ವಿರಾಟ್ ಮತ್ತು ಅನುಷ್ಕಾ ಅವರ ಈ ಕ್ಯಾಶುಯಲ್ ಲುಕ್ ನೋಡಿ ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಅನುಷ್ಕಾ ಶರ್ಮಾ ಶೀಘ್ರದಲ್ಲೇ ಚಿತ್ರದಲ್ಲಿ ಭಾರತೀಯ ಮಹಿಳಾ ಕ್ರಿಕೆಟಿಗ ಜೂಲನ್ ಗೋಸ್ವಾಮಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 'ಚಕ್ದಾ ಎಕ್ಸ್‌ಪ್ರೆಸ್‌'ಗಾಗಿ ಅನುಷ್ಕಾ ಇತ್ತೀಚಿನ ದಿನಗಳಲ್ಲಿ ಶ್ರಮಿಸುತ್ತಿದ್ದಾರೆ. ಚಿತ್ರವು ಶೀಘ್ರದಲ್ಲೇ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ABOUT THE AUTHOR

...view details