ಕರ್ನಾಟಕ

karnataka

ETV Bharat / entertainment

ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ವಿಕ್ಕಿ ಸ್ಪೆಷಲ್ ವಿಶ್​ - ಶಾರುಖ್ ಖಾನ್ ಬರ್ತ್​ಡೇ

ಬಾಲಿವುಡ್ ಮೆಗಾಸ್ಟಾರ್ ಹುಟ್ಟುಹಬ್ಬಕ್ಕೆ ವಿಕ್ಕಿ ಕೌಶಲ್ ವಿಶೇಷ ರೀತಿಯಲ್ಲಿ ವಿಶ್​ ಮಾಡಿದ್ದಾರೆ. ಶಾರುಖ್ ಖಾನ್ ಅವರ ವಿಶೇಷ ಫೊಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಾಕಿಕೊಂಡಿದ್ದಾರೆ.

vickys special wish for shahrukh khans birthday
ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ವಿಕ್ಕಿ ಸ್ಪೆಷಲ್ ವಿಷ್

By

Published : Nov 3, 2022, 11:31 AM IST

ಮುಂಬೈ: ಬಾಲಿವುಡ್ ಮೆಗಾಸ್ಟಾರ್ ಶಾರುಖ್ ಖಾನ್ ಅವರ 57ನೇ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಅಭಿಮಾನಿಗಳ ಜೊತೆಗೆ ದೊಡ್ಡ ದೊಡ್ಡ ಸ್ಟಾರ್ ಗಳು ಕೂಡ ಶುಭ ಹಾರೈಸಿದ್ದಾರೆ. ನಟ ವಿಕ್ಕಿ ಕೌಶಲ್ ಕೂಡ ಶುಭ ಹಾರೈಸಿದ್ದಾರೆ.

ಪ್ರಕಾಶಮಾನವಾದ ಹಳದಿ ಬಣ್ಣದ ಬೆಳಕಿನಲ್ಲಿ ದೇವರಂತೆ ಶಾರುಖ್ ಕಂಗೊಳಿಸುತ್ತಿರುವ ಫೊಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಹಾಕಿಕೊಂಡಿದ್ದಾರೆ. ಅದರಲ್ಲಿ ಹ್ಯಾಪಿ ಬರ್ತಡೇ ಸರ್. ನಿಮ್ಮಂತೆ ಯಾರೂ ಇಲ್ಲ ಎಂದು ಬರೆದುಕೊಂಡಿದ್ದಾರೆ.

ವಿಕ್ಕಿಯ ತಂದೆ, ಶಾಮ್ ಕೌಶಲ್ ಖ್ಯಾತ ಆ್ಯಕ್ಷನ್ ಕೊರಿಯೋಗ್ರಾಫರ್. ವಿಕ್ಕಿ ಮತ್ತು ಅವರ ಸಹೋದರ ಸನ್ನಿ ಫೋಟೋವನ್ನು ಸ್ಪಲ್ಪ ದಿನದ ಹಿಂದೆ ಹಂಚಿಕೊಂಡಿದ್ದರು. ಎಸ್ ಆರ್ ಕೆ ಜೊತೆ ಪೋಸ್ ನೀಡುತ್ತಿರುವ ಫೋಟೋ ಅದಾಗಿತ್ತು. 2001 ರಲ್ಲಿ 'ಅಶೋಕ' ಸೆಟ್ ನಲ್ಲಿ ತೆಗೆದ ಫೋಟೋ ಇದಾಗಿದೆ. ವಿಕ್ಕಿ ಕೂಡ ಒಂದು ದಿನ ಬಾಲಿವುಡ್ ಗೆ ಹೋಗುತ್ತಾನೆಂದು ನಾವು ಊಹಿಸಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಶೇರ್ಷಾ ನಿರ್ದೇಶಕ ವಿಷ್ಣುವರ್ಧನ್ ಕೂಡ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕಿಂಗ್‌ ಆಫ್‌ ರೊಮ್ಯಾನ್ಸ್‌ ಶಾರುಖ್‌ ಖಾನ್‌ ಹುಟ್ಟುಹಬ್ಬ: ಪಠಾಣ್‌ ಟೀಸರ್‌ ಬಿಡುಗಡೆ

ABOUT THE AUTHOR

...view details