ಹೈದರಾಬಾದ್ (ತೆಲಂಗಾಣ): ಬಾಲಿವುಡ್ ನಟ ವರುಣ್ ಧವನ್ ಅವರ ತಂದೆ ಡೇವಿಡ್ ಧವನ್ ಅವರ ಅನಾರೋಗ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಕಳೆದ ವಾರ ಮುಂಬೈನಲ್ಲಿ ಡೇವಿಡ್ ಆಸ್ಪತ್ರೆಗೆ ದಾಖಲಾದಾಗ ವರುಣ್ ವಿದೇಶದಲ್ಲಿ ನಡೆಯುತ್ತಿದ್ದ ಜಗ್ ಜಗ್ ಜೀಯೋ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರು. ಆದರೆ, ಅದೇ ಸಮಯದಲ್ಲಿ ತಂದೆಯ ಅನಾರೋಗ್ಯದ ಬಗ್ಗೆ ತಿಳಿದಿದ್ದು, ಕೂಡಲೇ ಅಲ್ಲಿಂದ ನಿರ್ಗಮಿಸಿದ್ದರು.
ನಮ್ಮ ತಂದೆ ಡೇವಿಡ್ ಆಸ್ಪತ್ರೆಯಲ್ಲಿ ಸುಮಾರು ಒಂದು ವಾರ ಕಳೆದ ನಂತರ ಈಗ ಮನೆಗೆ ಮರಳಿದ್ದಾರೆ. ಡೇವಿಡ್ ಆಸ್ಪತ್ರೆಯಲ್ಲಿದ್ದಾಗ ನಾನು ವಿದೇಶದಲ್ಲಿ ಕೆಲಸದ ನಿಮಿತ್ತ ಬ್ಯುಸಿಯಾಗಿದ್ದೆ. ಆದರೆ, ಈ ವೇಳೆ ಕೆಲಸ ಮಾಡುವುದು ಎಷ್ಟು ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ.