ಮುಂಬೈ:ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ 'ಪಠಾಣ್' ಗೂ ಹಾಲಿವುಡ್ ಸ್ಟಾರ್ ಟಾಮ್ ಕ್ರೂಸ್ಗೂ ಬಹಳ ನಂಟು ಇದೆ ಎಂದು ಚಿತ್ರ ನಿರ್ದೇಶಕ ಸಿದ್ಧಾರ್ಥ್ ಆನಂದ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಿದ್ಧಾರ್ಥ್, ನಮ್ಮ ದೇಶದ ಬಹುದೊಡ್ಡ ಹೀರೋ ಶಾರುಖ್ ಖಾನ್ರೊಂದಿಗೆ ನೀವು ದೊಡ್ಡ ಆ್ಯಕ್ಷನ್ ಚಿತ್ರ ಮಾಡಲು ಹೊರಟಾಗ ನಿಮಗೆ ಚಾಪಿಂಯನ್ ತಂಡ ಬೇಕು. ಅದೃಷ್ಟವಶಾತ್ ನಮಗೆ ಎ- ತಂಡ ಸಿಕ್ಕಿದ್ದು, ಟಾಮ್ ಕ್ರೂಸ್ ಜೊತೆ ಕೆಲಸ ಮಾಡಿರುವ ಸಾಹಸ ನಿರ್ದೇಶಕ ಕೇಸಿ ಓ' ನೀಲ್ ನಂತಹವರು ತಮ್ಮ ತಂಡ ಸೇರುತ್ತಿರುವುದು ನಮಗೆ ಸಂತಸ ತಂದಿದೆ ಎಂದಿದ್ದಾರೆ.
ಎಮ್ಮಿ ಪ್ರಶಸ್ತಿ ನಾಮಿನೇಟ್ ಆಗಿರುವ ಕೇಸಿ ಓ ನೀಲ್ ಹಾಲಿವುಡ್ನ ಉತ್ತಮ ಸಾಹಸ ನಿರ್ದೇಶಕರಾಗಿದ್ದಾರೆ. ಟಾಮ್ ಕ್ರೂಸ್ ಅವರ ಮಿಷನ್ ಇಂಪಾಸಿಬಲ್, ಜಾಕ್ ರಿಚರ್ನಂತಹ ಸಿನಿಮಾ ಹಿಂದೆ ಇವರು ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೇ ಮಾರ್ವಲ್ ಸ್ಟುಡಿಯೋ ಮತ್ತು ಸ್ಟೀವೆನ್ ಸ್ಪೈಲ್ಬರ್ಗ ಜೊತೆ ಕೂಡ ಕೆಲಸ ಮಾಡಿದ್ದಾರೆ. ಪಠಾಣ್ ಸಿನಿಮಾಕ್ಕೆ ಅವರ ಅನುಭವ ಬಂಡಾರವನ್ನು ಅವರು ತರಲಿದ್ದು, ಹಾಲಿವುಡ್ ಬೆನ್ನೆಲುಬಾಗಿರುವ ಅವರ ಸೃಜನಶೀಲತೆ ನಿಮ್ಮನ್ನು ಹಿಡಿದಿಡುತ್ತದೆ ಎಂದಿದ್ದಾರೆ ಸಿದ್ಧಾರ್ಥ್