ಕರ್ನಾಟಕ

karnataka

ETV Bharat / entertainment

ಫಿಟ್​ನೆಸ್​ಗಾಗಿ ಕಸರತ್ತು ನಡೆಸುತ್ತಿರುವ ಚಿತ್ರ ಹಂಚಿಕೊಂಡ ಏಕ್ ವಿಲನ್ ರಿಟರ್ನ್ಸ್ ನಟಿ - ತಾರಾ ಸುತಾರಿಯಾ ಮತ್ತು ಆಧಾರ್ ಜೈನ್

ಬಾಲಿವುಡ್​ ನಟಿ ತಾರಾ ಸುತಾರಿಯಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬುಧವಾರ ಫಿಟ್​ನೆಸ್​ಗಾಗಿ ಕಸರತ್ತು ನಡೆಸುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದ ಮೂಲಕ ನಟಿ ತನ್ನ ಅಭಿಮಾನಿಗಳನ್ನು ಫಿಟ್​ನೆಸ್​ ಬಗ್ಗೆ ಪ್ರೇರಿಪಿಸುತ್ತಿದ್ದಾರೆ.

Tara Sutaria begs for mercy  intense workout  Actress Tara Sutaria news  ಏಕ್ ವಿಲನ್ ರಿಟರ್ನ್ಸ್  ಫಿಟ್​ನೆಸ್​ಗಾಗಿ ಕಸರತ್ತು  ಸ್ಟೂಡೆಂಟ್ ಆಫ್ ದಿ ಇಯರ್ 2  ತಾರಾ ಸುತಾರಿಯಾ ಮತ್ತು ಆಧಾರ್ ಜೈನ್  ಬಾಲಿವುಡ್​ ನಟಿ ತಾರಾ ಸುತಾರಿಯಾ
ಏಕ್ ವಿಲನ್ ರಿಟರ್ನ್ಸ್ ನಟಿ

By

Published : Aug 11, 2022, 2:10 PM IST

'ಸ್ಟೂಡೆಂಟ್ ಆಫ್ ದಿ ಇಯರ್ 2' ನಟಿ ವ್ಯಾಯಾಮ ಮಾಡುತ್ತಿರುವ ಫೊಟೋವೊಂದನ್ನು ತಮ್ಮ ಇನ್​​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಅತಿಯಾದ ವ್ಯಾಯಾಮದ ಬಳಿಕ ನಟಿ ಕೂಲ್ - ಡೌನ್ ಸ್ಟ್ರೆಚಿಂಗ್ ಮಾಡುತ್ತಿರುವುದು ಚಿತ್ರದಲ್ಲಿ ಕಾಣಬಹುದಾಗಿದೆ. ತಾರಾ ಬಿಳಿ ಬಣ್ಣದ ಕ್ರಾಪ್ ಟಾಪ್ ಮತ್ತು ಪ್ರಿಂಟೆಡ್ ಜೆಗ್ಗಿಂಗ್ಸ್ ಧರಿಸಿದ್ದಾರೆ.

ಹಲವಾರು ಬಾರಿ ಬಾಲಿವುಡ್​ ನಟಿ ತಾರಾ ಸುತಾರಿಯಾ ಮತ್ತು ಆಧಾರ್ ಜೈನ್ ಒಟ್ಟಿಗೆ ವಿವಿಧ ಸಂದರ್ಭಗಳಲ್ಲಿ ಕಾಣಿಸಿಕೊಂಡಾಗ ಅವರ ಸಂಬಂಧದ ಬಗ್ಗೆ ವದಂತಿಗಳು ಹರಡಲು ಪ್ರಾರಂಭಿಸಿದವು. ಆಧಾರ್ ಸಹೋದರ ಅರ್ಮಾನ್ ಜೈನ್ ಅವರ ಮದುವೆಗೆ ತಾರಾ ಭಾಗಿಯಾದ ನಂತರ ಈ ಜೋಡಿ ತಮ್ಮ ಸಂಬಂಧವನ್ನು ದೃಢಪಡಿಸಿತು.

26 ವರ್ಷದ ತಾರಾ ಅವರ ಚಲನಚಿತ್ರ ವೃತ್ತಿಜೀವನದ ಕುರಿತು ಮಾತನಾಡುತ್ತಾ, ಕರಣ್ ಜೋಹರ್ ಅವರ 2019 ರ ಚಲನಚಿತ್ರ 'ಸ್ಟೂಡೆಂಟ್ ಆಫ್ ದಿ ಇಯರ್ 2' ನಲ್ಲಿ ನಟರಾದ ಟೈಗರ್ ಶ್ರಾಫ್ ಮತ್ತು ಅನನ್ಯಾ ಪಾಂಡೆ ಅವರೊಂದಿಗೆ ಪದಾರ್ಪಣೆ ಮಾಡಿದರು. ನಟನೆಯ ಹೊರತಾಗಿ ತಾರಾ ತಮ್ಮ ಗಾಯನ ಕೌಶಲ್ಯಕ್ಕೂ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಗಾಯನ ಸಾಮರ್ಥ್ಯವನ್ನು ಅನೇಕ ವೇದಿಕೆಗಳಲ್ಲಿ ಪ್ರದರ್ಶಿಸಿದ್ದಾರೆ.

ಆರಂಭದಲ್ಲಿ, ನಟಿ ಡಿಸ್ನಿ ಇಂಡಿಯಾದ ಬಿಗ್ ಬಡಾ ಬೂಮ್ ರಿಯಾಲಿಟಿ ಶೋನಲ್ಲಿ ಹಾಡುವ ಸ್ಪರ್ಧಿಯಾಗಿ ಪ್ರಾರಂಭಿಸಿದರು. ಅಲ್ಲಿಂದ ಅವರು ತಮ್ಮ ನಟನಾ ವೃತ್ತಿಗೆ ಪರಿವರ್ತನೆಗೊಂಡರು. ಟಿವಿ ಲೋಕಕ್ಕೆ ಪ್ರವೇಶಿಸಿದ ಅವರು 2012 ರಲ್ಲಿ 'ದಿ ಸೂಟ್ ಲೈಫ್ ಆಫ್ ಕರಣ್ & ಕಬೀರ್' ಮತ್ತು 2013 ರಲ್ಲಿ 'ಓಯೆ ಜಸ್ಸಿ' ನಂತಹ ವಿವಿಧ ಡಿಸ್ನಿ ಸಿಟ್‌ಕಾಮ್‌ಗಳಲ್ಲಿ ನಟಿಸಿದರು.

ತಾರಾ ಅವರು ಇತ್ತೀಚೆಗೆ ಬಿಡುಗಡೆಯಾದ 'ಏಕ್ ವಿಲನ್ ರಿಟರ್ನ್ಸ್' ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿದೆ. ಮೋಹಿತ್ ಸೂರಿ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಅರ್ಜುನ್ ಕಪೂರ್, ಜಾನ್ ಅಬ್ರಹಾಂ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೇ, ಅವರು 'ಅಪೂರ್ವ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನು ಓದಿ:ತಡವಾಗಿ ತೆರೆಗೆ ಅಪ್ಪಳಿಸಿದ ಲಾಲ್​ ಸಿಂಗ್​ ಚಡ್ಡಾ.. ನಿಟ್ಟುಸಿರು ಬಿಟ್ಟ ಅಮೀರ್​ ಖಾನ್​

ABOUT THE AUTHOR

...view details