ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಅವರ ಜೀವನಾಧಾರಿತ 'ಶಭಾಷ್ ಮಿಥು' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಖತ್ ಆಗಿ ಮೂಡಿ ಬಂದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಥಾಲಿ ರಾಜ್ 23 ವರ್ಷಗಳ ವೃತ್ತಿಜೀವನವನ್ನು ಹೊಂದಿದ್ದಾರೆ. ಅವರು ಏಕದಿನದಲ್ಲಿ 10,000 ಕ್ಕೂ ಹೆಚ್ಚು ರನ್ ಗಳಿಸಿದ್ದು, ಅನೇಕ ದಾಖಲೆಗಳನ್ನು ಮುರಿದಿದ್ದಾರೆ. ಪುರುಷ ಪ್ರಾಬಲ್ಯದ ಕ್ರೀಡೆಯಾದ ಕ್ರಿಕೆಟ್‌ನಲ್ಲಿ ವೃತ್ತಿಜೀವನ ರೂಪಿಸಲು ತಾಪ್ಸಿ ಪನ್ನು ಅಲಿಯಾಸ್ ಮಿಥು ತನ್ನ ಪೋಷಕರಿಂದ ಆಯ್ಕೆಗಾರರವರೆಗೆ ಹೇಗೆ ಹೋರಾಡಬೇಕು ಎಂಬುದನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ.
ಚಿತ್ರದ ಟ್ರೇಲರ್ ಅನ್ನು ಹಂಚಿಕೊಂಡ ತಾಪ್ಸಿ ಪನ್ನು, 'ಈಗಾಗಲೇ ನಿಮಗೆ ಹೆಸರು ತಿಳಿದಿದೆ. ಮಿಥಾಲಿಯವರನ್ನು ಲೆಜೆಂಡ್ ಆಗಿ ಮಾಡಿರುವ ಅವರ ಹಿಂದಿನ ಕಥೆಯನ್ನು ನೋಡಲು ನೀವು ಸಿದ್ಧರಾಗಿ. ‘ಜಂಟಲ್‌ಮ್ಯಾನ್ಸ್ ಗೇಮ್’ನಿಂದ ಪ್ರಭಾವಿತವಾಗುವ ಮಹಿಳೆಯ ಕಥೆಯನ್ನು ನಿಮ್ಮ ಮುಂದೆ ತರಲು ಮುಂದಾಗಿದ್ದೇವೆ. ಶಭಾಷ್ ಮಿಥು ಜುಲೈ 15 ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.