ಚೆನ್ನೈ(ತಮಿಳುನಾಡು): ಹಿರಿಯ ನಟ ರಜನಿಕಾಂತ್ ಪುತ್ರಿ ಸೌಂದರ್ಯ ಹಾಗೂ ವಿಶಾಗನ್ ದಂಪತಿಗೆ ಗಂಡು ಮಗು ಜನನವಾಗಿದೆ. ಮಗುವಿಗೆ ‘ವೀರ್ ರಜನಿಕಾಂತ್ ವನಂಗಮುಡಿ’ ಎಂದು ನಾಮಕರಣ ಮಾಡಲಾಗಿದೆ. "ನಾನು ಮತ್ತು ವಿಶಾಗನ್ ದೇವರ ದಯೆ ಮತ್ತು ನಮ್ಮ ಹೆತ್ತವರ ಆಶೀರ್ವಾದದಿಂದ ವೇದ್ ಕೃಷ್ಣನ ಕಿರಿಯ ಸಹೋದರನನ್ನು ಸ್ವಾಗತಿಸುತ್ತೇವೆ. ವೈದ್ಯರಿಗೆ ಧನ್ಯವಾದಗಳು" ಎಂದು ಸೌಂದರ್ಯ ರಜನಿಕಾಂತ್ ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ನಲ್ಲಿ ಬರೆದಿದ್ದಾರೆ.
ಎರಡನೇ ಮಗುವಿಗೆ ಜನ್ಮ ನೀಡಿದ ರಜನಿಕಾಂತ್ ಪುತ್ರಿ ಸೌಂದರ್ಯ - ಸೌಂದರ್ಯ ರಜನಿಕಾಂತ್ ಇನ್ಸ್ಟಾಗ್ರಾಮ್
ರಜನಿಕಾಂತ್ ಪುತ್ರಿ ಸೌಂದರ್ಯ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕುಟುಂಬದಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ.

ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದ ರಜನಿಕಾಂತ್ ಪುತ್ರಿ ಸೌಂದರ್ಯ
ಸೌಂದರ್ಯ ರಜನಿಕಾಂತ್ ಈ ಹಿಂದೆ ಉದ್ಯಮಿ ಅಶ್ವಿನ್ ಕುಮಾರ್ ಅವರನ್ನು ಮದುವೆಯಾಗಿದ್ದರು. ಮೊದಲ ಮಗುವಿಗೆ ವೇದಕೃಷ್ಣ ಎಂದು ಹೆಸರಿಟ್ಟಿದ್ದರು. ಆದರೆ, ಕಾರಣಾಂತರಗಳಿಂದ ವಿಚ್ಛೇದನ ಪಡೆದಿದ್ದರು. ನಂತರ ಸೌಂದರ್ಯ ರಜನಿಕಾಂತ್, 2019 ರಲ್ಲಿ ಉದ್ಯಮಿ ವಿಶಾಗನ್ ವನಂಗಮುಡಿ ಅವರನ್ನು ವಿವಾಹವಾಗಿದ್ದು, ಈಗ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ.
ಇದನ್ನೂ ಓದಿ:ಸಾವು ಬದುಕಿನ ಮಧ್ಯೆ ಹೋರಾಡುತ್ತಿರೋ ಅಪ್ಪಟ ಅಭಿಮಾನಿ ಆಸೆ ಪೂರೈಸಿದ ತಲೈವಾ
Last Updated : Sep 12, 2022, 10:45 AM IST