ನವದೆಹಲಿ:ಉಕ್ರೇನ್ ಮತ್ತು ರಷ್ಯಾದ ನಡುವಿನ ಯುದ್ಧ ಮುಂದುವರೆದಿದೆ. ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದು, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ, ಯುನಿಸೆಫ್ ರಾಯಭಾರಿ ಪ್ರಿಯಾಂಕಾ ಚೋಪ್ರಾ ಅವರು ವಿಶ್ವದ ಎಲ್ಲಾ ನಾಯಕರು ನಿರಾಶ್ರಿತರ ಪರವಾಗಿ ನಿಲ್ಲುವಂತೆ ಮನವಿ ಮಾಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಅವರು ಉಕ್ರೇನ್ನಿಂದ ಸ್ಥಳಾಂತರಗೊಂಡ ನಿರಾಶ್ರಿತರ ಬೆಂಬಲಕ್ಕೆ ನಿಲ್ಲಲು ಮನವಿ ಮಾಡಿದ್ದಾರೆ.
ಯುರೋಪ್‌ನಲ್ಲಿ ಬಿಕ್ಕಟ್ಟು ಮುಂದುವರೆದಿದೆ. ಮಾನವೀಯತೆಯನ್ನು ಮತ್ತು ನಿರಾಶ್ರಿತರನ್ನು ಬೆಂಬಲಿಸಲು ಕೆಲಸ ಮಾಡುವವರ ಪರವಾಗಿ ವಿಶ್ವದ ನಾಯಕರು ನಿಲ್ಲಬೇಕಿದೆ. ಉಕ್ರೇನ್ ಮತ್ತು ಪ್ರಪಂಚದಾದ್ಯಂತ ಸ್ಥಳಾಂತರಗೊಂಡ ಜನರನ್ನು ರಕ್ಷಿಸಲು ವಿಶ್ವದ ನಾಯಕರು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಯುದ್ಧವನ್ನು ನಾವು ಸುಮ್ಮನೆ ನಿಂತು ನೋಡಲು ಸಾಧ್ಯವಿಲ್ಲ ಎಂದು ಪ್ರಿಯಾಂಕಾ ಚೋಪ್ರಾ ಮನವಿ ಮಾಡಿದ್ದಾರೆ.