ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ನಡೆದ 'ಮೆಟ್ ಗಾಲಾ-2022' ಅದ್ಧೂರಿ ಕಾರ್ಯಕ್ರಮದಲ್ಲಿ ಬಂಗಾರದ ಸೀರೆಯುಟ್ಟ ಭಾರತೀಯ ನಾರಿಯೊಬ್ಬರು ಮಿರಮಿರ ಮಿಂಚಿದರು. ಈ ವರ್ಷದ ಥೀಮ್ ‘ಇನ್ ಅಮೆರಿಕ: ಆನ್ ಆಂಥಾಲಜಿ ಆಫ್ ಫ್ಯಾಶನ್’ ಅಥವಾ ‘ಗಿಲ್ಡೆಡ್ ಗ್ಲಾಮರ್’ ಆಗಿದ್ದು, ಇದರನುಗುಣವಾಗಿ ನತಾಶಾ ಪೂನವಾಲಾ ಚಿನ್ನದ ಸೀರೆ ತೊಟ್ಟು ಸಂಪೂರ್ಣವಾಗಿ ದೇಸಿ ಅವತಾರದಲ್ಲಿ ಕಂಗೊಳಿಸಿದರು.
ಫ್ಯಾಷನ್ ಜಗತ್ತಿನಲ್ಲಿ ಅತೀವ ಒಲವು ಹೊಂದಿರುವ ಉದ್ಯಮಿ ಮತ್ತು ಪೂನಾವಾಲಾ ಫ್ಯಾಷನ್‌ನ ಅತಿದೊಡ್ಡ ಸಂಭ್ರಮದಲ್ಲಿ ಖ್ಯಾತ ಫ್ಯಾಷನ್ ಡಿಸೈನರ್ ಸಬ್ಯಸಾಚಿ ಡಿಸೈನ್ ಮಾಡಿರುವ ಸೀರೆ ತೊಟ್ಟು ಸಂಭ್ರಮಿಸಿದ ನತಾಶಾ ನೆರೆದಿದ್ದವರು ವಾಹ್! ಎನ್ನುವಂತೆ ಮಾಡಿದರು.
ಇದನ್ನೂ ಓದಿ:ಸೀರೆ ಜೊತೆಗೆ ರೋಮ್ಯಾನ್ಸ್ ಮುಂದುವರಿಸಿದ ಗಂಗೂಬಾಯಿ.. ಹಾಟ್ ಡ್ರೆಸ್ ಮೂಲಕವೇ ಚಿತ್ರದ ಪ್ರಚಾರ ನಡೆಸುತ್ತಿರುವ ಅನನ್ಯಾ
'ಸೀರೆ ಅನನ್ಯ ಉಡುಪು. ಅದು ಗಡಿ ಮತ್ತು ಭೌಗೋಳಿಕತೆಯನ್ನು ಮೀರಿದ ಗುರುತು ಹೊಂದಿದೆ. ನಾನು ಯುವ ಫ್ಯಾಷನ್ ವಿದ್ಯಾರ್ಥಿಯಾಗಿದ್ದಾಗ ಮೆಟ್ ಗಾಲಾದಂತಹ ದೊಡ್ಡ ಜಾಗತಿಕ ಫ್ಯಾಷನ್ ಈವೆಂಟ್‌ಗಳಲ್ಲಿ ಸೀರೆಯನ್ನು ಯಾವಾಗ ನೋಡುತ್ತೇನೆ ಎಂದು ಆಗಾಗ್ಗೆ ಯೋಚಿಸುತ್ತಿದ್ದೆ' ಎಂದು ಸಬ್ಯಸಾಚಿ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಕಣ್ಣಲ್ಲೇ ಕೊಲ್ಲುವ ಬಸಣ್ಣಿ ಲುಕ್... ಸೀರೆ ಅವತಾರದಲ್ಲಿ ನಶೆ ಏರಿಸಿದ ತಾನ್ಯಾ
ನತಾಶಾ ಪೂನವಾಲಾ ಅವರು ಧರಿಸಿದ ಚಿನ್ನದ ಕರಕುಶಲ ಮುದ್ರಿತ ಟ್ಯೂಲ್ ಸೀರೆಯನ್ನು ಸಿಲ್ಕ್ ಫ್ಲೋಸ್ ದಾರದಿಂದ ಹೆಣೆಯಲಾಗಿದೆ. ಈ ಸೀರೆಯ ಸಿಂಗಾರಕ್ಕೆ ಬೆವೆಲ್ ಮಣಿಗಳು, ವಿಶೇಷ ಕಲ್ಲುಗಳು, ಹರಳುಗಳು ಮತ್ತು ಅಪ್ಲಿಕ್ಯುಡ್ ಪ್ರಿಂಟೆಡ್ ವೆಲ್ವೆಟ್ ಬಳಸಲಾಗಿದೆ.
ನತಾಶಾ ಪೂನವಾಲಾ ವಿಲ್ಲೂ ಪೂನಾವಾಲಾ ಫೌಂಡೇಶನ್‌ನ ಅಧ್ಯಕ್ಷರಾಗಿದ್ದಾರೆ. ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದಾರ್ ಪೂನಾವಾಲಾ ಅವರ ಪತ್ನಿ ಮತ್ತು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರೂ ಆಗಿದ್ದಾರೆ.