ನವದೆಹಲಿ: ಡಿಸೆಂಬರ್ 23 ರಿಂದ ತನ್ನ ಜನ್ಮಸ್ಥಳ ಬಹ್ರೇನ್‌ಗೆ ಪ್ರಯಾಣಿಸಲು ಅನುಮತಿ ನೀಡಬೇಕೆಂದು ಕೋರಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಪಟಿಯಾಲ ಹೌಸ್ ಕೋರ್ಟ್‌ಗೆ ಮಂಗಳವಾರ ಅರ್ಜಿ ಸಲ್ಲಿಸಿದ್ದಾರೆ. ಮನವಿಯ ಮೇರೆಗೆ ನ್ಯಾಯಾಲಯವು ಈ ವಿಚಾರದಲ್ಲಿ ಉತ್ತರ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ನಿರ್ದೇಶಿಸಿದೆ ಮತ್ತು ಗುರುವಾರ (ಡಿಸೆಂಬರ್ 22) ವಿಚಾರಣೆಗೆ ಪಟ್ಟಿಮಾಡಿದೆ.
ಜೈಲಿನಲ್ಲಿರುವ ಆರೋಪಿ ಸುಕೇಶ್ ಚಂದ್ರಶೇಖರ್ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿರುವ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ನ್ಯಾಯಾಲಯದ ಮುಂದೆ ಹಾಜರಾಗಿ ಮನವಿ ಸಲ್ಲಿಸಿದ್ದಾರೆ.
200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಲೀನಾ ಮರಿಯಾ ಪೌಲ್ (ಸುಕೇಶ್ ಚಂದ್ರಶೇಖರ್ ಅವರ ಪತ್ನಿ) ಅವರಿಂದ ಜಪ್ತಿ ಮಾಡಲಾದ 26 ಕಾರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಇಡಿಗೆ ನ್ಯಾಯಾಲಯ ಅನುಮತಿ ನೀಡಿದೆ. ಡಿಸೆಂಬರ್ 12 ರಂದು, ಆರೋಪಿಗಳ ವಿರುದ್ಧ ಕ್ರಮಾನುಸಾರ ಆರೋಪಗಳ ಬಗ್ಗೆ ವಾದಿಸುವಂತೆ ನ್ಯಾಯಾಲಯ ಇಡಿಗೆ ಸೂಚಿಸಿತು.
ಈ ಹಿಂದೆ ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) 2021 ರಲ್ಲಿ ವಂಚಕ ಸುಕೇಶ್ ಚಂದ್ರಶೇಖರ್, ಅವರ ಪತ್ನಿ ಲೀನಾ ಮರಿಯಾ ಪಾಲ್ ಮತ್ತು ಇತರರು ಸೇರಿದಂತೆ 14 ಆರೋಪಿಗಳನ್ನು ಹೆಸರಿಸಿ ಚಾರ್ಜ್‌ಶೀಟ್ ಸಲ್ಲಿಸಿತ್ತು. ಐಪಿಸಿಯ ವಿವಿಧ ಸೆಕ್ಷನ್‌ಗಳು ಮತ್ತು ಮಹಾರಾಷ್ಟ್ರದ ಸಂಘಟಿತ ಅಪರಾಧ ನಿಯಂತ್ರಣದ ನಿಬಂಧನೆಗಳ ಅಡಿಯಲ್ಲಿ (ಮಕೋಕಾ ಕಾಯ್ದೆ) ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಇದನ್ನೂ ಓದಿ: ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ನನ್ನದು: ರಾಹುಲ್ ಗಾಂಧಿ