ಹೈದರಾಬಾದ್: ಮಲೈಕಾ ಅರೋರಾ ಬಾಲಿವುಡ್‌ನ ಮನಮೋಹಕ ಸುಂದರಿಯರಲ್ಲಿ ಒಬ್ಬರು. ಬಾಲಿವುಡ್‌ನ ಮೋಸ್ಟ್ ಗ್ಲಾಮರಸ್ ನಟಿಯರಲ್ಲಿ ಮಲೈಕಾ ಹೆಸರು ಏಕಿದೆ ಎನ್ನುವುದನ್ನು ನಟಿ ತಮ್ಮ ಫೋಟೊಗಳ ಮೂಲಕ ಸಾಬೀತುಪಡಿಸುತ್ತಿರುತ್ತಾರೆ. ಇದೀಗ ಮಲೈಕಾ ತಮ್ಮ ಹೊಸ ಮಿರರ್ ಸೆಲ್ಫಿ ಮೂಲಕ ಸಾಮಾಜಿಕ ಜಾಲತಾಣಗಳ ಟೆಂಪರೇಚರ್ ಹೆಚ್ಚಿಸಿದ್ದಾರೆ.
ಮಲೈಕಾ ಅರೋರಾ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಮಿರರ್ ಸೆಲ್ಫಿ ಅಭಿಮಾನಿಗಳ ನಿದ್ದೆಗೆಡಿಸಿದೆ. ಸೆಲ್ಫಿಯಲ್ಲಿ ಅವರು ಬಿಳಿ ಉಡುಗೆಯಲ್ಲಿ ತನ್ನ ಕರ್ವಿ ಫಿಗರ್ ತೋರಿಸಿದ್ದಾರೆ. ಈ ಫೋಟೋದಲ್ಲಿ ಮಲೈಕಾ ಸೌಂದರ್ಯ ಎದ್ದು ಕಾಣುತ್ತಿದೆ. ಎರಡನೇ ಚಿತ್ರದಲ್ಲಿ ಅವರು ಫೇಸ್ ಪ್ಯಾಕ್ ಧರಿಸಿರುವುದನ್ನು ಕಾಣಬಹುದು.