ಬಾಲಿವುಡ್ ನಟಿ ಕೃತಿ ಸನೋನ್ ತಮ್ಮ ಇತ್ತೀಚಿನ ಫೋಟೋಶೂಟ್‌ನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಸೀರೆಯಲ್ಲಿ ಕೃತಿಯ ಈ ನೋಟ ತುಂಬಾ ಮುದ್ದಾಗಿದ್ದು, ಅವರು 'ಉಮಂಗ್ 2022' ಗಾಗಿ ಈ ಲುಕ್ನಲ್ಲಿ ಮಿಂಚಿದ್ದಾರೆ.
ಬಾಲಿವುಡ್ ಬೆಟಗಿ ಕೃತಿ ಸನೋನ್ ತೆರೆಯ ಮೇಲೆ ಮತ್ತು ಆಫ್ ಸ್ಕ್ರೀನ್ ಎರಡರಲ್ಲೂ ತುಂಬಾ ರಾಯಲ್ ಆಗಿ ಕಾಣಿಸಿಕೊಳ್ಳುತ್ತಾರೆ. ಅವರು ಇತ್ತೀಚೆಗೆ ಗೋಲ್ಡನ್ ಸೀರೆಯಲ್ಲಿ ಫೋಟೋಶೂಟ್ ಮಾಡ್ಸಿದ್ದಾರೆ. ಅವರ ಫೋಟೋಶೂಟ್ ಚಿತ್ರಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅವರ ನೋಟ ಮತ್ತು ಸೌಂದರ್ಯಕ್ಕೆ ಫಿದಾ ಆದ ನೆಟ್ಟಿಗರು ಹಾರ್ಟ್ ಸಿಂಬಲ್ನ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸುತ್ತಿದ್ದಾರೆ.