ಕರ್ನಾಟಕ

karnataka

ETV Bharat / entertainment

ಮತ್ತೆ ಕಾಫಿಡೇ ಅಲ್ಲಿ ಕೆಲಸ ಆರಂಭಿಸಿ, ಗ್ರಾಹಕರನ್ನು ಖುಷಿ ಪಡಿಸುತ್ತೇನೆ: ಆಸ್ಕರ್​ ನಾಮ ನಿರ್ದೇಶಿತ ನಟ - ನಟ ಜೇಮ್ಸ್​ ಮಾರ್ಟಿನ್

ಸಿನಿಮಾದ ಯಶಸ್ಸು ಸಿಕ್ಕಿದ ಬಳಿಕ ತಾವು ಬಂದ ದಾರಿಯನ್ನು ಮರೆಯುವವರ ಸಂಖ್ಯೆ ಹೆಚ್ಚು. ಆದರೆ, ಐರಿಶ್​ ನಟ ಜೇಮ್ಸ್​ ಮಾರ್ಟಿನ್​ ಆಸ್ಕರ್​ ನಾಮ ನಿರ್ದೆಶನದ ಬಳಿಕವೂ ತಾವು ಸ್ಟಾರ್​ ಬಕ್ಸ್​ನಲ್ಲಿ ಕೆಲಸ ಮುಂದುವರಸುವುದಾಗಿ ತಿಳಿಸಿದ್ದಾರೆ.

ಮತ್ತೆ ಕಾಫಿಡೇ ಅಲ್ಲಿ ಕೆಲಸ ಆರಂಭಿಸಿ, ಗ್ರಾಹಕರನ್ನು ಖುಷಿ ಪಡಿಸುತ್ತೇನೆ; ಆಸ್ಕರ್​ ನಾಮ ನಿರ್ದೇಶಿತ ನಟ
james-martin-says-he-will-get-back-to-his-work-in-coffee-shop

By

Published : Jan 31, 2023, 2:16 PM IST

ಲಾಸ್​ ಏಂಜಲೀಸ್​( ಅಮೆರಿಕ):ಜೇಮ್ಸ್​ ಮಾರ್ಟಿನ್​ ಅಭಿನಯದ 'ಆನ್​ ಐರಿಶ್​ ಗುಡ್​ಬೈ' ಚಿತ್ರ ಆಸ್ಕರ್​ ನಾಮ ನಿರ್ದೇಶನಕ್ಕೆ ಒಳಗಾಗಿದೆ. ಈ ಬೆನ್ನಲ್ಲೇ ಮಾತನಾಡಿರುವ ನಟ ಜೇಮ್ಸ್​ ಮಾರ್ಟಿನ್​, ತಾವು ಈ ಶಾರ್ಟ್​ ಫಿಲ್ಮ್​ ಮಾಡುವ ಮೊದಲು ಬೆಲ್​ಫಾಸ್ಟ್​ನಲ್ಲಿದ್ದ ಸ್ಟಾರ್​ಬಕ್ಸ್​ನಲ್ಲಿ ಕೆಲಸ ಮಾಡುತ್ತಿದ್ದೆ. ಆಸ್ಕರ್​ ಅಂಗಳದಲ್ಲಿ ನನ್ನ ಚಿತ್ರ ನಾಮ ನಿರ್ದೇಶನಗೊಂಡರು ನನ್ನ ಕೆಲಸವನ್ನು ನಾನು ಮುಂದುವರೆಸುತ್ತೇನೆ ಎಂದಿದ್ದಾರೆ. ಡೌನ್​ ಸಿಂಡ್ರೋಮ್​ಗೆ ಒಳಗಾಗಿರುವ 30 ವರ್ಷದ ನಟ ಜೇಮ್ಸ್​, ಈ ಕೆಲಸದ ಮೂಲಕ ತಾವು ಗ್ರಾಹಕರಿಗಾಗಿ ಇಡೀ ದಿನ ಸಹಾಯ ಮಾಡುತ್ತಿದ್ದೆ. ಇದು ಒಳ್ಳೆ ಅನುಭವ ಎಂದಿದ್ದಾರೆ.

ನಾರ್ತ್​​ ಐರ್ಲೆಂಡ್​ ಮೂಲದ 'ಆನ್​ ಐರಿಶ್​ ಗುಡ್​​ಬೈ' ಸಿನಿಮಾ ತಾಯಿ ಸಾವಿನ ಬಳಿಕ ಇಬ್ಬರು ದೂರಾದ ಸಹೋದರರು ಒಟ್ಟಾಗುವ ಕಥಾನಕವನ್ನು ಹೊಂದಿದೆ. ಸದ್ಯ ಈ ಚಿತ್ರ ಉತ್ತಮ ಕಿರು ಚಿತ್ರ ವರ್ಗದಲ್ಲಿ ಆಸ್ಕರ್​ಗೆ ನಾಮ ನಿರ್ದೇಶನಗೊಂಡಿದೆ. ಇದರಲ್ಲಿ ಒಬ್ಬ ಸಹೋದರನ ಪಾತ್ರಕ್ಕೆ ಜೇಮ್ಸ್​ ಮಾರ್ಟಿನ್​ ಬಣ್ಣ ಹಚ್ಚಿದ್ದಾರೆ.

ಹಿಂದಿನ ಕೆಲಸದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ ನಟ:ಇಷ್ಟೇ ಅಲ್ಲದೇ, ಜೇಮ್ಸ್​ ಇಟಾಲಿಯನ್​ ರೆಸ್ಟೋರೆಂಟ್​ನಲ್ಲಿ ಕೂಡ ಬಾಣಸಿಗರಾಗಿ ಕಾರ್ಯ ನಿರ್ವಹಿಸಿರುವುದಾಗಿ ತಿಳಿಸಿದ್ದಾರೆ. ನಾನು ಗಾರ್ಲಿಕ್​ ಬ್ರೆಡ್​​, ಮೀಟ್​ಬಾಲ್ಸ್​, ಸಲಾಡ್​ ಮತ್ತು ಮುಸ್ಸೆಲ್ಸ್​, ಚಿಪ್ಸ್​ ಮತ್ತು ಸ್ಟಾಫ್​ ರೀತಿಯ ಪದಾರ್ಥಗಳನ್ನು ಮಾಡಬಲ್ಲೆ ಎಂದಿದ್ದಾರೆ. ನಾನು ಕಷ್ಟದಲ್ಲಿದ್ದಾಗ ನನಗೆ ಸಹಾಯ ಮಾಡಿದ್ದು, ಇದೇ ಸ್ಟಾರ್​ಬಾಕ್ಸ್​ ಎಂದು ತಮ್ಮ ಕೆಲಸದ ಅನುಭವ ಕುರಿತು ಮಾತನಾಡಿದ್ದಾರೆ

ಡೌನ್​ ಸಿಂಡ್ರೋಮ್​ ಇದ್ದು ನಟನೆ ಮಾಡಿದರ ಕುರಿತು ಮಾತನಾಡಿರುವ ನಟ, ನಟನೆಯನ್ನು ಯಾರು ಬೇಕಾದರೂ ಮಾಡಬಹುದು. ನಿಮಗೆ ಡೌನ್​ ಸಿಂಡ್ರೋಮ್​ ಇರುವುದು ದೊಡ್ಡ ವಿಷಯವಾಗುವುದಿಲ್ಲ ಎಂದಿದ್ದಾರೆ. ಇದೇ ವೇಳೆ, ಸ್ಟೀಫನ್​ ಹಾಕಿಂಗ್ಸ್​ ಉದಾಹರಣೆಯನ್ನು ಅವರು ನೀಡಿದರು. ಅವರು ಅದ್ಭುತ ನಟರು. ಅವರಿಗೆ ನಟನೆ ಮಾಡುವುದು ಗೊತ್ತು. ಅವರನ್ನು ವಯಸ್ಕರಂತೆ ನೀವು ಭಾವಿಸಬೇಕು. ಪುಸ್ತಕದ ಹೊದಿಕೆ ನೋಡಿ ಎಂದಿಗೂ ತೀರ್ಪು ನೀಡಬಾರದು ಎಂದರು.

ಅಭಿಮಾನಿಗಳ ಗಮನ ಸೆಳೆದ ಜೇಮ್ಸ್​: ಈ ಚಿತ್ರದ ಹೊರತಾಗಿ 'ಅಪ್ಸ್​ ಅಂಡ್​ ಡೌನ್ಸ್'​ ಸಿನಿಮಾದ ನಟನೆ ಮೂಲಕ ಕೂಡ ಜೇಮ್ಸ್​ ಅಭಿಮಾನಿಗಳ ಗಮನ ಸೆಳೆದಿದ್ದರು. ಸದ್ಯ ಲೂಯಿಸ್​ ಡವಿಸ್​ ಅವರೊಂದಿಗೆ ಜೇಮ್ಸ್​ ಸಂಬಂಧದಲ್ಲಿದ್ದಾರೆ. ಕಳೆದ ಮಾರ್ಚ್​ನಲ್ಲಿ ಅಕಾಡೆಮಿ ಅವಾರ್ಡ್​ ವೇಳೆ ಇವರ ನಡುವೆ ಸಂಬಂಧ ಶುರುವಾಯಿತು. 'ಆನ್​ ಐರಿಶ್​ ಗುಡ್​​ಬೈ'ನಲ್ಲಿ ಗ್ರೈನ್ನೆ ಪಾತ್ರದಲ್ಲಿ ಮೆಷಿಲ್​ ಫೈರ್ಲೆ ನಟಿಸಿದ್ದರೆ, ಪ್ಯಾಡಿ ಜೆನ್ಕಿನ್ಸ್​ ತಂಡೆ ಒಶೀಯಾ ಪಾತ್ರದಲ್ಲಿ ನಟಿಸಿದ್ದರು. ಈ ಕಿರು ಚಿತ್ರವನ್ನು ಟಾಮ್​ ಬೆರ್ಕೆಲಿ ಮತ್ತು ರೋಸ್​ ವೈಟ್​ ನಿರ್ದೇಶನ ಮಾಡಿ ಚಿತ್ರಕಥೆ ಬರೆದಿದ್ದರು.

ಆನಂದ ಬಾಷ್ಪದಿಂದ ಮಿಂದೆದ್ದ ನಟ: ಇನ್ನು ತಾವು ನಟಿಸಿದ ಆನ್​ ಐರಿಶ್​ ಗುಡ್ ಬೈ ಸಿನಿಮಾ ಆಸ್ಕರ್​ ಅಂಗಳದಲ್ಲಿ ನಾಮ ನಿರ್ದೇಶನಗೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ನಟ ಜೇಮ್ಸ್​ ಮಾರ್ಟಿನ್​ ಸಂಭ್ರಮದಿಂದ ಕಣ್ಣೀರು ಹಾಕಿದ್ದರು.

ಇದನ್ನೂ ಓದಿ: ಗಲ್ಲಾಪೆಟ್ಟಿಗೆಯಲ್ಲಿ "ಪಠಾಣ್"​ ಕಮಾಲ್​: 6 ದಿನದಲ್ಲಿ ₹542 ಕೋಟಿ ಸಂಪಾದಿಸಿ ದಾಖಲೆ

ABOUT THE AUTHOR

...view details