ಜೇಮ್ಸ್ ಕ್ಯಾಮರಾನ್ ನಿರ್ದೇಶನದ 'ಅವತಾರ್: ದಿ ವೇ ಆಫ್ ವಾಟರ್' ಟೀಸರ್‌ನ ದೃಶ್ಯವೈಭವ ನೋಡಿ ಸಿನಿಮಾಪ್ರಿಯರು ನಿಬ್ಬೆರಗಾಗಿದ್ದಾರೆ. ಭೂಮಿಯಂತೆ ಕಾಣುವ, ಆಕರ್ಷಕ ಪಂಡೋರಾ ಜಗತ್ತಿನಲ್ಲಿ ವಾಸಿಸುವ 'ನಾವಿ' ಜೀವಿಗಳ ಕುಟುಂಬ ಮತ್ತಷ್ಟು ವಿಸ್ತಾರಗೊಂಡಿದೆ. ಅವರೊಂದಿಗೆ ಬೆಸೆದುಕೊಂಡಿರುವ ಹಾರುವ ಜೀವಿಗಳ ಜೊತೆಗೆ ಈಜುವ ವಿಶೇಷ ಜಲಚರಗಳ ದರ್ಶನವೂ ಆಗುತ್ತದೆ. ನೀರಿನೊಳಗೆ, ಮೇಲೆ.. ಹೀಗೆ ನೀರು ಇಲ್ಲಿನ ಕಥಾವಸ್ತು ಎಂಬಂತೆ ಭಾಸವಾಗುತ್ತದೆ.
‘ಅವತಾರ್’ ಸರಣಿಯಿಂದ ಐದು ಸಿನಿಮಾಗಳು ಹೊರಬರಲಿವೆ. ಮೊದಲ ಸಿನಿಮಾ 2009ರಲ್ಲಿ ತೆರೆಗೆ ಅಪ್ಪಳಿಸಿತ್ತು. ಇದಾದ ಬಳಿಕ ಸೀಕ್ವೆಲ್ ಬರಲು ಸುಮಾರು 13 ವರ್ಷಗಳೇ ಬೇಕಾಯಿತು. ‘ಅವತಾರ್’ ಚಿತ್ರ ವಿಶ್ವದ ಸಿನಿಮಾ ಇತಿಹಾಸದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿಗಳಿಸಿದೆ. 2009ರಲ್ಲಿ ತೆರೆಗೆ ಬಂದ ಸಿನಿಮಾದ ಸೀಕ್ವೆಲ್ ಮೊದಲೇ ಘೋಷಣೆ ಆಗಿತ್ತು. ಆದರೆ, ಟೈಟಲ್ ಏನು? ಸಿನಿಮಾ ಯಾವಾಗ ರಿಲೀಸ್ ಆಗಲಿದೆ? ಎನ್ನುವ ಮಾಹಿತಿ ಹೊರಬಿದ್ದಿರಲಿಲ್ಲ. ಈಗ ವಿಚಾರ ಅಧಿಕೃತವಾಗಿದೆ.
ಇದನ್ನೂ ಓದಿ:ಅವತಾರ್ 2 ಮತ್ತು 3ನೇ ಭಾಗದ ಸಿನಿಮಾ ಚಿತ್ರೀಕರಣದ ಬಗ್ಗೆ ಮಾಹಿತಿ ಕೊಟ್ಟ ಕ್ಯಾಮರೂನ್