ಲಾಸ್‌ವೇಗಾಸ್/ಅಮೆರಿಕ :"ಫಾಲು" ಎಂಬ ವೇದಿಕೆಯನ್ನ ಬಳಸಿಕೊಂಡು ಪ್ರಸಿದ್ಧಿ ಪಡೆದ ಭಾರತೀಯ-ಅಮೆರಿಕನ್ ಗಾಯಕಿ ಫಲ್ಗುಣಿ ಶಾ ಅವರಿಗೆ ವಿಶ್ವದ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ. 'ಎ ಕಲರ್‌ಫುಲ್ ವರ್ಲ್ಡ್' ಅತ್ಯುತ್ತಮ ಮಕ್ಕಳ ಸಂಗೀತ ಆಲ್ಬಂ ಎಂದು ಪರಿಗಣಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಸಂತಸದ ವಿಷಯವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಫಲ್ಗುಣಿ, 'ಇಂದು ನಡೆದ ಮ್ಯಾಜಿಕ್ ಅನ್ನು ವಿವರಿಸಲು ನನ್ನ ಬಳಿ ಪದಗಳೇ ಇಲ್ಲ. ಗ್ರ್ಯಾಮಿ ಪ್ರೀಮಿಯರ್ ಸಮಾರಂಭದಲ್ಲಿ ಪ್ರಶಸ್ತಿ ಸಿಕ್ಕಿರುವುದು ಸಂತಸ ನೀಡಿದೆ. 'ಕಲರ್‌ಫುಲ್ ವರ್ಲ್ಡ್'ನಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಹಾಗೂ ರೆಕಾರ್ಡಿಂಗ್ ಅಕಾಡೆಮಿಗೆ ಧನ್ಯವಾದಗಳು' ಅಂತಾ ಬರೆದುಕೊಂಡಿದ್ದಾರೆ.