ಹೈದರಾಬಾದ್: ಸದ್ಯ ಹಾಲಿವುಡ್ನ ಗಾಡ್ ಫಾದರ್ ನಟ 83 ವರ್ಷದ ಆಲ್ ಪಾಸಿನೊ ಸುದ್ದಿ ಮಾಡುತ್ತಿದ್ದಾರೆ. ಕಾರಣ ಅವರ ಮೊಮ್ಮಗಳ ವಯಸ್ಸಿನ ಗೆಳತಿಗೆ ತಂದೆಯಾಗುತ್ತಿರುವ ವಿಚಾರದಿಂದ. ಆಲ್ ಪಾಸಿನೊ ಹಾಗೂ ಅವರ 29 ವರ್ಷದ ಗೆಳತಿ ನೂರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿದೆ. ಮೊದಲಬಾರಿಗೆ 2022ರಲ್ಲಿ ಒಟ್ಟಿಗೆ ಕಾಣಿಸಿಕೊಂಡ ಈ ಜೋಡಿ ಸಾಂಕ್ರಾಮಿಕ ಸಮಯದಲ್ಲಿ ಡೇಟಿಂಗ್ ನಡೆಸಿದ್ದಾರೆ ಎಂಬ ವರದಿಯಾಗಿದೆ.
ಆದರೆ, ಇದೀಗ ಬಂದ ಹೊಸ ಸುದ್ದಿ ಎಂದರೆ, ಅಲ್ ಪಾಸಿನೊ ಮತ್ತು ನೂರ್ ಆಲ್ಫಾಲ್ಹಾ ಇಬ್ಬರು ಬಹುದಿನಗಳಿಂದ ಒಟ್ಟಿಗೆ ಉಳಿದಿಲ್ಲ. ಆಪ್ತ ಮೂಲಗಳ ಪ್ರಕಾರ, ಪಾಸಿನೊ ಈ ಮಗುವಿನ ಪಿತೃತ್ವ ಪರೀಕ್ಷೆ ನಡೆಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಮಾಧ್ಯಮಗಳ ಅನುಸಾರ, ಆಲ್ ಫಾಸಿನೊಗೆ ತಮ್ಮ 22 ವರ್ಷದ ಮಗಳು ಓಲಿವಿಯಾಳಿಂದ ಹಿರಿಯ ನಟನಿಗೆ ನೂರ್ ಪರಿಚಯವಾಗಿದ್ದು, ಇವರು ಕೆಲಸ ಕಾಲ ಡೇಟಿಂಗ್ ನಡೆಸಿದ್ದಾರೆ
ಓಲಿವಿಯಾ ಮತ್ತು ನೂರು ಆಪ್ತ ಸ್ನೇಹಿತರಾಗಿದ್ದು, ಇಬ್ಬರೂ ಎಲ್ಲಿಗೆ ಹೋದರೂ ಅವುಗಳ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಪರಸ್ಪರ ಟ್ಯಾಗ್ ಮಾಡುತ್ತಿದ್ದರು. ಇವರ ನಡುವಿದ್ದ ಆಪ್ತತೆಯಿಂದ ನೂರ್ ಕೂಡ ಹಿರಿಯ ನಟನಿಗೆ ಆತ್ಮೀಯವಾಗಿದ್ದಾರೆ. ಆದರೆ, ಆಲ್ ಪಾಸಿನೊ ಮತ್ತು ನೂರ್ ನಡುವಿನ ಸಂಬಂಧ ಈಗಾಗಲೇ ತುಂಬಾ ದಿನಗಳ ಹಿಂದಿಯೇ ಕಡಿದು ಹೋಗಿದೆ. ಅಲ್ಲದೇ ನೂರು 11 ವಾರಗಳ ಕಾಲ ಆಕೆ ಗರ್ಭಿಣಿ ಆಗಿರುವ ಸತ್ಯವನ್ನು ಉದ್ದೇಶ ಪೂರ್ವಕವಾಗಿ ಆತನಿಂದ ಮರೆ ಮಾಚಿದ್ದಳು.