ಮಂಬೈ:ಟಾಲಿವುಡ್ ಚಿತ್ರರಂಗದಲ್ಲಿ ಸೂಪರ್ ಹಿಟ್ ಆಗಿ ಹೊರಹೊಮ್ಮಿದ ‘ಮಿಡಲ್ ಕ್ಲಾಸ್ ಅಬ್ಬಾಯ್’ ಚಿತ್ರದ ರಿಮೇಕ್ ‘ನಿಕಮ್ಮಾ’ ಮೂಲಕ ಶಿಲ್ಪಾ ಶೆಟ್ಟಿ ಕುಂದ್ರಾ ಹಿರಿತೆರೆಗೆ ವಾಪಸ್ ಆಗುತ್ತಿದ್ದಾರೆ. ಈ ತೆಲುಗು ಸೂಪರ್ ಹಿಟ್ ಚಿತ್ರದಲ್ಲಿ ನಟ ನಾನಿ, ನಟಿಯರಾದ ಭೂಮಿಕಾ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಈ ಚಿತ್ರದ ಬಗ್ಗೆ ಮಾತನಾಡುವಾಗ ನಟಿ ಶಿಲ್ಪಾ ಶೆಟ್ಟಿ ತನ್ನ ಕೆಲಸ, ಜೀವನ ಮತ್ತು ತಾಯ್ತನ ಕಾರ್ಯವನ್ನು ಬ್ಯಾಲೆನ್ಸ್ ಮಾಡಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಅವರು ಸಂಪೂರ್ಣವಾಗಿ ತಾಯಂದಿರು ಸೂಪರ್ ಹೀರೋಗಳು ಎಂದು ಹೇಳಿದ್ದಾರೆ.
ಪ್ರತಿಯೊಬ್ಬ ಮಹಿಳೆ ಗೃಹಿಣಿಯರೇ, ಅವರ ತಮ್ಮ-ತಮ್ಮ ಮನೆಗಳಲ್ಲಿ ಮತ್ತು ಕಚೇರಿಗಳಲ್ಲಿ ತಮ್ಮ ವೃತ್ತಿಯನ್ನು ಸಮತೋಲನದಿಂದ ನಿಭಾಯಿಸುತ್ತಾರೆ. ಅಮ್ಮಂದಿರು ಕೇಪ್ ಧರಿಸದ (ಸೂಪರ್ ಹೀರೋಗಳಿರುವ ಗೌನ್) ಸೂಪರ್ ಹೀರೋಗಳು ಆಗಿದ್ದಾರೆ. ನಿಮ್ಮೊಳಗೆ ಒಬ್ಬ ನಾಯಕ ಇದ್ದಾನೆ ಎಂದು ಹೇಳಿದ್ದಾರೆ.