ಮುಂಬೈ(ಮಹಾರಾಷ್ಟ್ರ): ಇತ್ತೀಚಿನ 'ಕಾಫಿ ವಿತ್ ಕರಣ್' ಕಾರ್ಯಕ್ರಮದ ಪ್ರೋಮೋ ಹಾಟ್ ಟಾಪಿಕ್ ಆಗಿದೆ. ಕರಣ್ ಜೋಹರ್ ನಡೆಸಿಕೊಡುವ ಈ ಶೋದಲ್ಲಿ ಬಾಲಿವುಡ್ ನಟ ಶಾರೂಕ್ ಖಾನ್ ಪತ್ನಿ ಗೌರಿ ಖಾನ್ ಸೇರಿದಂತೆ ಮಹಿಪ್ ಕಪೂರ್ ಮತ್ತು ಭಾವನಾ ಪಾಂಡೆ ಪಾಲ್ಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕರಣ್ ಜೋಹರ್ ಕೇಳುವ ಪ್ರಶ್ನೆಗೆ ತಮಾಷೆಯಾಗಿಯೇ ಉತ್ತರಿಸಿದ್ದಾರೆ.
ಇಂಟೀರಿಯರ್ ಡಿಸೈನರ್ ಆಗಿರುವ ಗೌರಿ ಖಾನ್ ಅವರಿಗೆ, ಡೇಟಿಂಗ್ ಬಗ್ಗೆ ಮಗಳು ಸುಹಾನಾ ಖಾನ್ಗೆ ನಿಮ್ಮ ಸಲಹೆ ಏನು? ಎಂದು ಕೇಳಿದಾಗ, ಏಕಕಾಲದಲ್ಲಿ ಇಬ್ಬರು ಹುಡುಗರೊಂದಿಗೆ ಡೇಟಿಂಗ್ ಮಾಡಬೇಡ ಎಂದು ಹೇಳುತ್ತೇನೆ ಎಂದರು. ನಂತರದ ಕರಣ್ ಪ್ರಶ್ನೆಗಳಿಗೆ ಉತ್ತರಿಸಿದ ಗೌರಿ, ಶಾರುಖ್ ಜೊತೆಗಿನ ಪ್ರೇಮಕಥೆಗೆ ‘ದಿಲ್ವಾಲೆ ದುಲ್ಹನಿಯಾ ಲೇಜಾಯೇಂಗೆ’ ಎಂದು ಹೆಸರಿಡುವೆ. ನಮ್ಮ ಪ್ರೇಮಕಥೆಯಲ್ಲಿ ಸಂಘರ್ಷಗಳಿವೆ ಎಂದರು.