ನಟಿ ಉರ್ಫಿ ಜಾವೇದ್ ಹೊಸ ಹೊಸ ಫ್ಯಾಷನ್‌ನಿಂದ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಇವರು ಎಲ್ಲ ಮಿತಿಗಳನ್ನು ಮೀರಿದಂತಿದೆ. ಉರ್ಫಿ ಹೆಚ್ಚಾಗಿ ಸೆಕ್ಸಿ ಮತ್ತು ಬೋಲ್ಡ್ ಬಟ್ಟೆಗಳಲ್ಲಿ ಕಂಡುಬರ್ತಾರೆ. ಆದರೆ ಈ ಬಾರಿ ಅದಕ್ಕೂ ಒಂದು ಹಂತ ಮೀರಿ ಕ್ಯಾಮೆರಾಗೆ ಫೋಸ್ ಕೊಟ್ಟಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ.
ಪಿನ್‌ಗಳಿಂದ ಉಡುಪು ರಚಿಸುವುದರಿಂದ ಹಿಡಿದು ಬ್ಲೇಡ್‌ಗಳಿಂದ ಮಾಡಿದ ಬಟ್ಟೆಗಳನ್ನು ಧರಿಸುವವರೆಗೆ ಉರ್ಫಿ ನೆಟ್ಟಿಗರನ್ನು ಚಕಿತಗೊಳಿಸಿದ್ದರು. ಈ ಮೂಲಕ ತನ್ನ ವಿಶಿಷ್ಟ ಫ್ಯಾಷನ್ ಪ್ರಜ್ಞೆಯನ್ನು ನಿರ್ಲಕ್ಷಿಸುವುದು ಅಸಾಧ್ಯವೆಂದು ಸಾಬೀತುಪಡಿಸುತ್ತಿದ್ದಾರೆ. ಈಗ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಎರಡು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಉಂಟು ಮಾಡಿವೆ.