ಕರ್ನಾಟಕ

karnataka

ETV Bharat / entertainment

ತಾಯಿ ಮಧು ಚೋಪ್ರಾ ಹುಟ್ಟುಹಬ್ಬ: ಶುಭಾಶಯ ಕೋರಿದ ಪ್ರಿಯಾಂಕಾ - ನಿಕ್ ಜೋನಾಸ್ - ಮಾಲ್ತಿ ಚೋಪ್ರಾ ಜೋನಾಸ್ ಹೊಸ ಚಿತ್ರವನ್ನು ಹಂಚಿಕೊಂಡಿಕೊಂಡ ಪ್ರಿಯಾಂಕಾ ಚೋಪ್ರಾ

ತಾಯಿ ಮಧು ಚೋಪ್ರಾ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಮಗಳು ಮಾಲ್ತಿ ಚೋಪ್ರಾ ಜೋನಾಸ್ ಹೊಸ ಚಿತ್ರವನ್ನು ಹಂಚಿಕೊಂಡಿಕೊಂಡಿದ್ದಾರೆ.

actor Priyanka Chopra mother Madhu Chopras birthday
ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ ಹುಟ್ಟುಹಬ್ಬ

By

Published : Jun 17, 2022, 12:22 PM IST

ಬಾಲಿವುಡ್​​ನ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ತಮ್ಮ ತಾಯಿ ಮಧು ಚೋಪ್ರಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಾಯಿಯ ಹೆಸರಿನಲ್ಲಿ ಸುಂದರವಾದ ಪೋಸ್ಟ್ ಸಹ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ, ಪ್ರಿಯಾಂಕಾ ಚೋಪ್ರಾ ಮತ್ತು ಮಧು ಚೋಪ್ರಾ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಅವರ ಮೊಮ್ಮಗಳು ಮಾಲ್ತಿ ಚೋಪ್ರಾ ಜೋನಾಸ್ ಮಧು ಚೋಪ್ರಾ ಅವರ ಮಡಿಲಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

"ಹುಟ್ಟುಹಬ್ಬದ ಶುಭಾಶಯಗಳು ಅಮ್ಮ. ನೀವು ಯಾವಾಗಲೂ ನಗುತಿರಿ. ನಿಮ್ಮ ಜೀವನೋತ್ಸಾಹ ಮತ್ತು ಪ್ರತಿದಿನದ ಅನುಭವಗಳಿಂದ ನೀವು ನನಗೆ ತುಂಬಾ ಸ್ಫೂರ್ತಿ ನೀಡುತ್ತೀರಿ. ಐ ಲವ್ ಯು ಎಂದು ಬರೆದಿದ್ದಾರೆ. ಆದರೆ, ಈ ಪೋಸ್ಟ್​​ನಲ್ಲಿ ಎಲ್ಲರ ಗಮನ ಸೆಳೆದದ್ದು ಬೇಬಿ ಮಾಲ್ತಿ ಚೋಪ್ರಾ ಜೋನಾಸ್. ಚಿತ್ರಕ್ಕೆ ಪ್ರತಿಕ್ರಿಯಿಸಿದ ನೆಟ್ಟಿಗರು," ಮಗು ತುಂಬಾ ಮುದ್ದಾಗಿದೆ" ಎಂದು ಕಾಮೆಂಟ್​​ ಮಾಡಿದ್ದಾರೆ.

ಮಧು ಚೋಪ್ರಾ-ನಿಕ್ ಜೋನಾಸ್

2018ರಲ್ಲಿ ವಿವಾಹವಾದ ಪ್ರಿಯಾಂಕಾ ಮತ್ತು ನಿಕ್, ಜನವರಿ 2022 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದರು. 2022ರ ತಾಯಂದಿರ ದಿನದಂದು ಪ್ರಿಯಾಂಕಾ ತನ್ನ ಮಗುವಿನ ಮೊದಲ ಫೋಟೋವನ್ನು ಹಂಚಿಕೊಂಡಿದ್ದರು. ಇನ್ನು ಪ್ರಿಯಾಂಕ ಪತಿ ನಿಕ್ ಜೋನಾಸ್ ಸಹ ಅತ್ತೆಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ನಿಕ್ ಅತ್ತೆ ಮಧು ಅವರೊಂದಿಗಿನ ಸುಂದರವಾದ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ ಹುಟ್ಟುಹಬ್ಬ

ಪ್ರಿಯಾಂಕಾ 'ಇಟ್ಸ್ ಆಲ್ ಕಮಿಂಗ್ ಬ್ಯಾಕ್ ಟು ಮಿ' ಮತ್ತು 'ಸಿಟಾಡೆಲ್' ಸಿರೀಸ್​​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್‌ನಲ್ಲಿ ಅವರು ಫರ್ಹಾನ್ ಅಖ್ತರ್ ಅವರ 'ಜೀ ಲೇ ಜರಾ' ಚಿತ್ರದಲ್ಲಿ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ನಟಿಸಲಿದ್ದಾರೆ.

ಇದನ್ನೂ ಓದಿ:ವಿಡಿಯೋ: ಗೋಲ್ಡನ್ ಕಲರ್ ಗೌನ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡ ಪ್ರಿಯಾಂಕಾ ಚೋಪ್ರಾ

ABOUT THE AUTHOR

...view details