ಹೈದರಾಬಾದ್:ಇತ್ತೀಚೆಗೆ ಬಿಡುಗಡೆಯಾದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಒಂದಿಲ್ಲೊಂದು ವಿಷಯಕ್ಕೆ ಸದಾ ಚರ್ಚೆಯಲ್ಲಿದೆ. ವಿದೇಶದಲ್ಲೂ ಈ ಚಿತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ಇದೀಗ ಅದರಲ್ಲಿ ನಟಿಸಿರುವ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ.
ಇಬ್ಬರು ಪಂಡಿತರು ಮಂತ್ರಗಳನ್ನು ಪಠಿಸುತ್ತಿರುವುದನ್ನು ಮತ್ತು ಅನುಪಮ್ ಖೇರ್‌ಗೆ ಹೂವಿನ ಹಾರವನ್ನು ಹಾಕುತ್ತಿರುವುದನ್ನು ಆ ವಿಡಿಯೋದಲ್ಲಿ ಕಾಣಬಹುದು. ಅನುಪಮ್ ಖೇರ್ ಅವರನ್ನು ಭಗವಂತನಂತೆ ಪೂಜಿಸಲಾಗುತ್ತಿದೆ. ಚಿತ್ರದಲ್ಲಿ ಅನುಪಮ್ ಖೇರ್ ಅವರು ಕಾಶ್ಮೀರಿ ಪಂಡಿತ್ ಪುಷ್ಕರನಾಥ್ ಪಂಡಿತ್ ಪಾತ್ರವನ್ನು ನಿರ್ವಹಿಸಿದ್ದಾರೆ.