ಕರ್ನಾಟಕ

karnataka

ETV Bharat / entertainment

ಸೋದರ ಸಂಬಂಧಿ ಅಲನ್ನಾ ಪಾಂಡೆ ಮದುವೆಯಲ್ಲಿ ದೇಸಿ ಹಾಟ್​ ಲುಕ್​ನಲ್ಲಿ ಅನನ್ಯಾ ಪಾಂಡೆ ಮಿಂಚು! - Etv Bharat Kannada News

ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರ ದೇಸಿ ಹಾಟ್​ಲುಕ್​ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

Bollywood actress Ananya Pandey
ಬಾಲಿವುಡ್ ನಟಿ ಅನನ್ಯಾ ಪಾಂಡೆ

By

Published : Mar 16, 2023, 9:29 PM IST

ಹೈದರಾಬಾದ್​ :ಬಾಲಿವುಡ್​ನ ಬಹುಬೇಡಿಕೆ ನಟಿ ಅನನ್ಯಾ ಪಾಂಡೆ ತನ್ನ ಸೋದರಸಂಬಂಧಿ ಅಲನ್ನಾ ಪಾಂಡೆ ಅವರ ಮದುವೆಯ ಸಂಭ್ರಮದಲ್ಲಿ ಸಾಂಪ್ರದಾಯಿಕ ಸೀರೆ ತೊಟ್ಟು ನೆಟ್ಟಿಗರ ತಲೆತಿರುಗುವಂತೆ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಹಾಕಿದ್ದಾರೆ. ಮದುವೆಗೆ ಮುಂಚಿತವಾಗಿ ಹೊಸ ವಿಡಿಯೋಯೊಂದನ್ನು ಹಂಚಿಕೊಂಡಿದ್ದರು. ಮತ್ತೊಂದೆಡೆ ಈ ವಿಡಿಯೋಗೆ ಗೆಹ್ರೈಯಾನ್ ಸಿನಿಮಾದಲ್ಲಿ ಅನನ್ಯಾ ಪಾಂಡೆ ಜೊತೆ ನಟಿಸಿದ್ದ, ಬಾಲಿವುಡ್​ ಜನಪ್ರಿಯ ನಟ ಸಿದ್ಧಾಂತ್ ಚತುರ್ವೇದಿ ಅವರು "ಲಡ್ಕಿವಾಲೆ ತೈಯಾರ್ ಹೈ" ಎಂದು ಕಮೆಂಟ್​ ಮಾಡಿದ್ದಾರೆ. ಈ ಕಾಮೆಂಟ್​ ಈಗ ಹೆಚ್ಚು ಸದ್ದು ಮಾಡುತ್ತಿದೆ.

ಇನ್ನು ಅನನ್ಯಾ ತನ್ನ ದೇಸಿ ಲುಕ್​ನಲ್ಲಿ ಸಖತ್​ ಹಾಟ್​ ಆಗಿ ಚಂದ್ರನಂತೆ ಬೆಳ್ಳನ್ನೆ ಕಾಂತಿಯನ್ನು ಚೆಲ್ಲುತ್ತಿದ್ದಾರೆ. ನಟಿ ಬಿಳಿ ಸ್ಟ್ರಾಪ್ಪಿ ಬ್ಲೌಸ್​ನೊಂದಿಗೆ ತಿಳಿ ನೀಲಿಬಣ್ಣದ ಸೀರೆಯನ್ನುಟ್ಟಿದ್ದು ಮೋಹಕ ನೋಟದಿಂದ ಸರಳ ಮತ್ತು ಸೊಗಸಾಗಿ ಕಾಣುತ್ತಿದ್ದಾರೆ. ಹಣೆಗೆ ಹೊಳೆಯುವ ಸಣ್ಣದೊಂದು ಬಿಂದಿ ಇಟ್ಟು, ತಮ್ಮ ತಲೆ ಕೂದಲನ್ನು ಅಲೆ ಅಲೆಯಾಗಿ ತೆರೆದಿಟ್ಟು, ತಮ್ಮ ಬಲಗೈಯಲ್ಲಿ ಎರಡು ಬಳೆಗಳನ್ನು ತೊಟ್ಟು ವ್ಹಾವ್​ ಸಿಂಪಲ್​ ಆಗಿ ರೆಡಿಯಾಗಿದ್ದು, ನೋಡುಗರ ಕಣ್ಣು ಕುಕ್ಕುವಂತೆ ಮಾಡಿತ್ತು. ಈ ಮದುವೆ ಕಾರ್ಯಕ್ರಮಕ್ಕೆ ಅನನ್ಯಾ ತನ್ನ ಪೋಷಕರಾದ ಚಂಕಿ ಪಾಂಡೆ ಮತ್ತು ಭಾವನಾ ಪಾಂಡೆಯೊಂದಿಗೆ ಆಗಮಿಸಿದ್ದರು. ತಂದೆ ಚಂಕಿ ಪಾಂಡೆ ಬಿಳಿ ಶೆರ್ವಾನಿ ಧರಿಸಿ ಕಾಣಿಸಿಕೊಂಡರೆ, ತಾಯಿ ಭಾವನಾ ಮೃದುವಾದ ಹಸಿರು ಮಿನುಗುವ ಗೌನ್‌ನಲ್ಲಿ ಭಾರವಾದ ನೆಕ್‌ಪೀಸ್ ಮತ್ತು ಒಂದೆರಡು ಸ್ಟೇಟ್‌ಮೆಂಟ್ ಬಳೆಗಳೊಂದಿಗೆ ಕಾಣಿಸಿಕೊಂಡರು.

ಇದಕ್ಕೂ ಮುಂಚೆ ಟಾಲಿವುಡ್​ ನಟ ವಿಜಯ್​ ದೇವರಕೊಂಡ ಜೊತೆ 'ಲೈಗರ್' ತೆಲಗು ಸಿನಿಮಾದಲ್ಲಿ ಕ್ಯಾ​ಮೆರಾಗೆ ವಿಭಿನ್ನವಾಗಿ ಪೋಸ್​ ನೀಡಿ ವಿಡಿಯೋವನ್ನು ಹರಿ ಬಿಟ್ಟಿದ್ದರು. ಈ ವಿಡಿಯೋಗೆ ಅಭಿಮಾನಿಗಳು ಹಾಗೂ ಬಾಲಿವುಡ್​ ಸೆಲೆಬ್ರಿಟಿಗಳು ಹೃದಯ ಮತ್ತು ಬೆಂಕಿ ಎಮೋಜಿಗಳಿಂದ ಕಾಮೆಂಟ್​ ಬಾಕ್ಸ್​ನನ್ನು ತುಂಬಿಸಿದ್ದರು. ಈ ಪೋಸ್ಟ್​ಗೆ ಪ್ರತಿಕ್ರಿಯಿಸಿದ ಬಾಲಿವುಡ್​ ಕಿಂಗ್​ಖಾನ್​ ಶಾರುಖ್​ ಖಾನ್​ ಅವರ ಮಗಳು​ ಸುಹಾನ್​ ಖಾನ್​, "ಲಡ್ಕಿ ವಾಲೆ ತೈಯಾರ್​ ಹೈ" ಎಂದು ಕಾಮೆಂಟ್​ ಮಾಡಿದ್ದರು. ಇದಕ್ಕೆ ಮತ್ತೊಂದೆಡೆ ಸಾಮಾಜಿಕ ಜಾಲತಾಣ ಬಳಕೆದಾರರು "ಲಡ್ಕೆ ವಾಲೆ ಭಿ ತೈಯಾರ್​ ಹೈ"ಎಂದು ಸುಹಾನ್​ ಖಾನ್​ ಅವರ ಕಮೆಂಟ್​ಗೆ ಟಾಂಗ್​ ಕೊಟ್ಟಿದ್ದರು. ಇನ್ನೂ ಸುಹಾನ್​ ಖಾನ್​ ಮತ್ತು ಅನನ್ಯ ಪಾಂಡೆ ಇಬ್ಬರು ಕೂಡ ಆಪ್ತ ಸ್ನೇಹಿತೆಯಾಗಿದ್ದಾರೆ.

ಅನನ್ಯಾ ಪಾಂಡೆ ಕೊನೆಯದಾಗಿ ವಿಜಯ್ ದೇವರಕೊಂಡ ಅವರೊಂದಿಗೆ ಲೈಗರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗಾ ಇವರ ಮುಂದಿನ ಸಿನಿಮಾನ ಆಯುಷ್ಮಾನ್ ಖುರಾನಾ ಅವರ ಡ್ರೀಮ್ ಗರ್ಲ್ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೂ ಸಿದ್ಧಾಂತ್ ಚತುರ್ವೇದಿ ಮತ್ತು ಆದರ್ಶ್ ಗೌರವ್ ಜೊತೆಗೆ ಖೋ ಗಯೇ ಹಮ್ ಕಹಾನ್ ಸಿನಿಮಾದ ತಯಾರಿ ನಡೆಸುತ್ತಿದ್ದಾರೆ.

ಇದನ್ನೂ ಓದಿ :ಹೊಸ ಫೋಟೋ ಶೇರ್ ಮಾಡಿದ ಅನುಷ್ಕಾ ಶರ್ಮಾ: ಅಭಿಮಾನಿಗಳು ಹೀಗಂದ್ರು ನೋಡಿ!

ABOUT THE AUTHOR

...view details