ಮುಂಬೈ (ಮಹಾರಾಷ್ಟ್ರ):ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಕೆಲವು ದಿನಗಳ ಹಿಂದೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಸದ್ಯ ಹೋಮ್ ಐಸೋಲೇಶನ್‌ನಲ್ಲಿದ್ದಾರೆ. ತಮ್ಮ ಬ್ಲಾಗ್‌ನಲ್ಲಿ ಅವರು ಅಭಿಮಾನಿಗಳೊಂದಿಗೆ ಆರೋಗ್ಯದ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಕೊರೊನಾದಿಂದಾಗಿ ದಿನ ಕಳೆಯುವುದು ಕಷ್ಟಕರವಾಗಿದೆ ಎಂದು ಹೇಳಿದ್ದ ಅಮಿತಾಬ್ ಬಚ್ಚನ್ ಈಗ ಸ್ವತಃ ತನ್ನ ಬಾತ್ ರೂಂ ಅನ್ನು ಸ್ವಚ್ಛಗೊಳಿಸುತ್ತಿದ್ದೇನೆ ಮತ್ತು ಹಾಸಿಗೆ ಸರಿಪಡಿಸುತ್ತೇನೆ ಎಂದು ಹೇಳಿದ್ದಾರೆ.
ಬಿಗ್ ಬಿ ಕೇವಲ ಚಲನಚಿತ್ರಗಳಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿಯೂ ತುಂಬಾ ಸಕ್ರಿಯರಾಗಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ, ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ, "ಕೋವಿಡ್ 19 ಕಾರಣದಿಂದಾಗಿ ಇದ್ದಕ್ಕಿದ್ದಂತೆ ನಿಮ್ಮ ಬಾತ್ರೂಮ್ ಅನ್ನು ನೀವೇ ಸ್ವಚ್ಛಗೊಳಿಸಬೇಕಾಗುತ್ತದೆ.
ಹಾಸಿಗೆಯನ್ನೇ ಸರಿಪಡಿಬೇಕು ಮತ್ತು ನೆಲವನ್ನು ಸ್ವಚ್ಛಗೊಳಿಸಬೇಕು. ಉಪಹಾರ, ಚಹಾ ಮತ್ತು ಕಾಫಿಯನ್ನು ನೀವೇ ತಯಾರಿಸಬೇಕು. ಕರೆಗಳಿಗೆ ವೈಯಕ್ತಿಕವಾಗಿ ಉತ್ತರಿಸಬೇಕು ಮತ್ತು ಶುಶ್ರೂಷಾ ಸಿಬ್ಬಂದಿ ಸಹಾಯವಿಲ್ಲದೇ, ವೈದ್ಯರು ನೀಡುವ ಔಷಧೋಪಚಾರ ತಾವಾಗಿಯೇ ಅನುಸರಿಸಬೇಕು.
ಈ ದಿನಗಳಲ್ಲಿ ನನ್ನ ದಿನವು ಹೀಗೆ ನಡೆಯುತ್ತಿದೆ. ಇದು ಒಂದು ರೀತಿಯಲ್ಲಿ ಸಾಕಷ್ಟು ಆನಂದದಾಯಕ ಮತ್ತು ತೃಪ್ತಿಕರವೂ ಆಗಿದೆ. ಸಿಬ್ಬಂದಿ ಮೇಲೆ ನನ್ನ ಅವಲಂಬನೆ ಕಡಿಮೆಯಾಗುತ್ತಿದೆ. ನನ್ನ ಸಿಬ್ಬಂದಿ ನನ್ನೊಂದಿಗೆ ಎಷ್ಟು ಕೆಲಸ ಮಾಡಬೇಕೆಂದು ನಾನು ಅರ್ಥಮಾಡಿಕೊಂಡಿದ್ದೇನೆ. ಇದರಿಂದ ಅವರ ಮೇಲಿನ ಗೌರವ ಇನ್ನಷ್ಟು ಹೆಚ್ಚಿದೆ ಎಂದಿದ್ದಾರೆ.