ಕರ್ನಾಟಕ

karnataka

ETV Bharat / entertainment

ವಿಮಾನ ದುರಂತ: ಹಾಲಿವುಡ್​ ನಟ ಒಲಿವರ್, ಇಬ್ಬರು ಪುತ್ರಿಯರು ಸಾವು - Plane crash

ಹಾಲಿವುಡ್​​ ನಟ ಕ್ರಿಸ್ಟಿಯನ್​​ ಒಲಿವರ್ ಹಾಗೂ ಅವರ ಇಬ್ಬರು ಪುತ್ರಿಯರು ವಿಮಾನ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ.

Christian Oliver died
ಕ್ರಿಸ್ತಿಯನ್​​ ಒಲಿವರ್ ನಿಧನ

By ETV Bharat Karnataka Team

Published : Jan 6, 2024, 1:13 PM IST

ಸ್ಯಾನ್ ಜುಆನ್ (ಪುಯೆರ್ಟೋ ರಿಕೊ):ಪೂರ್ವ ಕೆರಿಬಿಯನ್‌ನ ಪುಟ್ಟ ದ್ವೀಪವೊಂದರ ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಹಾಲಿವುಡ್​​ ನಟ ಕ್ರಿಸ್ಟಿಯನ್​​ ಒಲಿವರ್ (Christian Oliver) ಮತ್ತು ಅವರ ಇಬ್ಬರು ಪುತ್ರಿಯರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ. ಗುರುವಾರದಂದು ಈ ವಿಮಾನ ದುರಂತ ಸಂಭವಿಸಿದೆ. ವಿಮಾನವು ಸೇಂಟ್ ಲೂಸಿಯಾಕ್ಕೆ ತೆರಳುತ್ತಿದ್ದಾಗ ಬೆಕ್ವಿಯಾ ಸಮೀಪದ ಪೆಟಿಟ್ ನೆವಿಸ್ ದ್ವೀಪದ ಬಳಿ ಅಪಘಾತಕ್ಕೀಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಟ ಕ್ರಿಸ್ಟಿಯನ್​​ ಒಲಿವರ್ ಜೊತೆ ಅವರ ಇಬ್ಬರು ಪುತ್ರಿಯರೂ ಸಹ ಅಸುನೀಗಿದ್ದಾರೆ. ಮೃತರನ್ನು ಮಡಿತಾ ಕ್ಲೆಪ್ಸರ್ (10) ಮತ್ತು ಅನ್ನಿಕ್ ಕ್ಲೆಪ್ಸರ್ (12) ಎಂದು ಗುರುತಿಸಲಾಗಿದೆ. ಮೃತ ನಟನಿಗೆ 51 ವರ್ಷ ವಯಸ್ಸಾಗಿತ್ತು. ಪೈಲಟ್ ರಾಬರ್ಟ್ ಸ್ಯಾಚ್ಸ್ ಕೂಡ ದುರಂತದಲ್ಲಿ ಕೊನೆಯುಸಿರೆಳೆದಿದ್ದಾರೆ. ಪೊಲೀಸರ ಪ್ರಕಾರ, ಅಪಘಾತದ ನಿಖರ ಕಾರಣವಿನ್ನೂ ಸ್ಪಷ್ಟವಾಗಿಲ್ಲ. ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ ಕೋಸ್ಟ್ ಗಾರ್ಡ್ ಈ ಪ್ರದೇಶಕ್ಕೆ ತೆರಳುತ್ತಿದ್ದಂತೆ, ಆ ಪ್ರದೇಶದಲ್ಲಿದ್ದ ಮೀನುಗಾರರು ಮತ್ತು ಡೈವರ್‌ಗಳು ಅಪಘಾತದ ಸ್ಥಳಕ್ಕೆ ನೆರವಿಗೆ ತೆರಳಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ತಮಿಳಿನ ದಿವಂಗತ ನಟ ವಿಜಯ್​ಕಾಂತ್ ಮನೆಗೆ ಶಿವರಾಜ್ ಕುಮಾರ್ ಭೇಟಿ

ಮೀನುಗಾರರು ಮತ್ತು ಡೈವರ್‌ಗಳ ನಿಸ್ವಾರ್ಥ ಸೇವೆ, ಕೆಚ್ಚೆದೆಯ ಕಾರ್ಯ ನಿಜಕ್ಕೂ ಶ್ಲಾಘನೀಯ. ಅವರ ಈ ಸೇವೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜರ್ಮನಿಯಲ್ಲಿ ಜನಿಸಿದ ಕ್ರಿಸ್ಟಿಯನ್​​ ಒಲಿವರ್ 2008ರ ಜನಪ್ರಿಯ 'ಸ್ಪೀಡ್ ರೇಸರ್' ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದು, ಕಿರುತೆರೆಯಲ್ಲಿಯೂ ಗುರುತಿಸಿಕೊಂಡಿದ್ದರು. ಆದ್ರೀಗ ವಿಮಾನ ದುರಂತದಲ್ಲಿ ಕೊನೆಯುಸಿರೆಳೆದಿದ್ದು, ಅಭಿಮಾನಿಗಳೂ ಸೇರಿದಂತೆ ಚಿತ್ರರಂಗದವರು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ:ತಮ್ಮ ಡೀಪ್‌ಫೇಕ್ ಫೋಟೋ ಕಂಡರೂ ಮೌನ ವಹಿಸಿದ್ದ ಜಾಹ್ನವಿ: ರಶ್ಮಿಕಾ ನಡೆಗೆ ಮೆಚ್ಚುಗೆ

ABOUT THE AUTHOR

...view details