ಚಿಕ್ಕೋಡಿ : ಜಿಲ್ಲೆಯ ಹುಕ್ಕೇರಿ, ಅಥಣಿ, ರಾಯಭಾಗ, ಕುಡಚಿ ಸೇರಿದಂತೆ ಹಲವೆಡೆ ಕಾಂಗ್ರೆಸ್ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ. ಈ ಸಾರಿಯೂ ಗೆಲುವು ನಮ್ಮದಾಗಲಿದೆ ಎಂದು ಸಂಸದ ಪ್ರಕಾಶ್ ಹುಕ್ಕೇರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪರವೇ ಒಲವು ಹೆಚ್ಚಿದೆ, ಈ ಸಾರಿಯೂ ನಾನೇ ಗೆಲ್ಲುವೆ- ಮೈತ್ರಿ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ವಿಶ್ವಾಸ - victory
ಚಿಕ್ಕೋಡಿಯಲ್ಲಿ ಮತದಾರರು ನನ್ನ ಕೈ ಹಿಡಿಯುವ ಭರವಸೆ ಇದ್ದು ಈ ಬಾರಿ ಗೆಲವು ನನ್ನದೇ ಎಂದು ಸಂಸದ ಪ್ರಕಾಶ್ ಹುಕ್ಕೇರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಕಾಶ್ ಹುಕ್ಕೇರಿ
ಬಹಿರಂಗ ಪ್ರಚಾರಕ್ಕೆ ಕೊನೆದಿನವಾದ ಇಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೆರಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಅಬ್ಬರದ ಪ್ರಚಾರ ನಡೆಸಿದರು.
ಹುಕ್ಕೇರಿಗೆ ಸ್ಥಳೀಯ ಶಾಸಕ ಮಹೇಶ್ ಕುಮಠಳ್ಳಿ, ಮಾಜಿ ಶಾಸಕ ಶಹಜಾನ ಡೊಂಗರಗಾವ ಮತ್ತು ಪುರಸಭೆ ಸದಸ್ಯರು ಸೇರಿ ಕಾಂಗ್ರೆಸ್, ಜೆಡಿಎಸ್ ಮುಖಂಡರು ಸಾಥ್ ನೀಡಿದ್ರು. ಪಾದಯಾತ್ರೆ ಮೂಲಕ ನಗರದ ವ್ಯಾಪಾರಸ್ಥರಲ್ಲಿ ಮತಯಾಚನೆ ಮಾಡಿದರು.