ಚಿತ್ರದುರ್ಗ:ಮತದಾನ ಮಾಡದವರು ನಾಗರಿಕರೇ ಅಲ್ಲ, ಅವರೆಲ್ಲ ಅನಾಗರಿಕರು. ತಮ್ಮ ಹಕ್ಕು ಚಲಾಯಿಸದವರಿಗೆ ಸರ್ಕಾರ ಸೌಲಭ್ಯಗಳನ್ನು ಒದಗಿಸಬಾರದು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸರ್ಕಾರಕ್ಕೆ ಸಲಹೆ ನೀಡಿದರು.
ವೋಟ್ ಹಾಕದವರಿಗೆ ಸರ್ಕಾರ ಸೌಲಭ್ಯ ಕಡಿತಗೊಳಿಸಬೇಕು: ಸಿರಿಗೆರೆ ತರಳಬಾಳು ಶ್ರೀ - kannada news
ಮತದಾನ ಮಾಡದವರಿಗೆ ಮುಂದಿನ ಚುನಾವಣೆಯಲ್ಲಿ ಮತದಾನ ಮಾಡೋವರೆಗೂ ಸರ್ಕಾರಿ ಸೌಲಭ್ಯಗಳನ್ನು ಒದಗಿಸಬಾರದು ಎಂದು ಸಿರಿಗೆರೆ ಬೃಹನ್ಮಠದ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದರು.
![ವೋಟ್ ಹಾಕದವರಿಗೆ ಸರ್ಕಾರ ಸೌಲಭ್ಯ ಕಡಿತಗೊಳಿಸಬೇಕು: ಸಿರಿಗೆರೆ ತರಳಬಾಳು ಶ್ರೀ](https://etvbharatimages.akamaized.net/etvbharat/images/768-512-3041119-thumbnail-3x2-ctd.jpg)
ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಸಿರಿಗೆರೆ ಮತಗಟ್ಟೆ 72 ರಲ್ಲಿ ಮತದಾನದ ವೇಳೆ ಮಾತನಾಡಿದ ಸ್ವಾಮೀಜಿ, ಮತದಾನ ಮಾಡದವರಿಗೆ ಮುಂದಿನ ಚುನಾವಣೆಯಲ್ಲಿ ಮತದಾನ ಮಾಡೋವರೆಗೂ ಸರ್ಕಾರಿ ಸೌಲಭ್ಯ ನಿಲ್ಲಿಸಬೇಕು. ಮತದಾನ ಮಾಡದ ಸರ್ಕಾರಿ ನೌಕರರಿಗೆ ಬಡ್ತಿ ನೀಡಬಾರದು, ಹಳ್ಳಿ ಜನಕ್ಕೆ ಸರ್ಕಾರ ನೀಡೋ ಗ್ಯಾಸ್ ಸೇರಿದಂತೆ ಇತರೆ ಸೌಲಭ್ಯ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.