ಕರ್ನಾಟಕ

karnataka

ETV Bharat / elections

ಆರು ತಿಂಗಳ ಬಳಿಕ ಫೈನಲ್ ಮ್ಯಾಚ್​​​: ಸಚಿವ ಸತೀಶ ಜಾರಕಿಹೊಳಿ - kannada news

ರಮೇಶ ಜಾರಕಿಹೊಳಿ ಪಕ್ಷದಿಂದ ಹೊರಗೆ ಹೋಗಿದ್ದಾರೆ. ಅವರ ಮೇಲೆ ಕ್ರಮ ಕೈಗೊಂಡ್ರು ಅಷ್ಟೆ ಬಿಟ್ರು ಅಷ್ಟೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಸಚಿವ ಸತೀಶ ಜಾರಕಿಹೊಳಿ

By

Published : Apr 21, 2019, 9:19 PM IST

ಬೆಳಗಾವಿ : ಗೋಕಾಕ ‌ಶಾಸಕ‌ ರಮೇಶ ಜಾರಕಿಹೊಳಿ‌ ಬೆಂಬಲಿಗರ ಸಭೆ ನಡೆಸಿ ಬಿಜೆಪಿ ಬೆಂಬಲಿಸುವಂತೆ ಹೇಳಿದ್ದು, ಅವರು ನಮ್ಮ ಪಕ್ಷದ ಜೊತೆಗಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷ ಸಂಘಟನೆ ದೃಷ್ಟಿಯಿಂದ ಗೋಕಾಕಿನಲ್ಲಿ ಅನಿವಾರ್ಯವಾಗಿ ನಾನು ಪ್ರಚಾರ ನಡೆಸಬೇಕಾಗಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಬಿಜೆಪಿ ಬೆಂಬಲಿಸುವಂತೆ ಬೆಂಬಲಿಗರಿಗೆ ಸೂಚನೆ‌ ನೀಡಿದ್ದಾರೆ. ಮಾಜಿ ಸಚಿವ‌ ರಮೇಶ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಮ್ಮ ನಾಯಕರು ಸ್ಪೀಕರ್​ಗೆ ಈಗಾಗಲೇ ದೂರು ನೀಡಿದ್ದಾರೆ.

ಸಚಿವ ಸತೀಶ ಜಾರಕಿಹೊಳಿ

ರಮೇಶ ಜಾರಕಿಹೊಳಿ ಜಿಲ್ಲೆಯಲ್ಲಿ ಬೇರೆ ಬೇರೆ ಸ್ಥಳದಲ್ಲಿ ಬಿಜೆಪಿ ಪರ ಬ್ಯಾಟಿಂಗ್ ಮಾಡಿದ್ದಾರೆ. ರಮೇಶ ಜಾರಕಿಹೊಳಿ ಪಕ್ಷದಿಂದ ಹೊರಗೆ ಹೋಗಿದ್ದಾರೆ. ಅವರ ಮೇಲೆ ಕ್ರಮ ಕೈಗೊಂಡ್ರು ಅಷ್ಟೆ ಬಿಟ್ರು ಅಷ್ಟೆ. 20 ವರ್ಷ ದಿಂದ ಗೋಕಾಕ ಕ್ಷೇತ್ರ ರಮೇಶ ಜಾರಕಿಹೊಳಿ ಹಿಡತದಲ್ಲಿತ್ತು. ಈ ಚುನಾವಣೆ ಸ್ವಲ್ಪ ಗೊಂದಲ ಆಗೋದು ಸಹಜ. ಪಕ್ಷದ ಪರ ಇರುವ ಕಾರ್ಯಕರ್ತರು ಗೋಕಾಕಿನಲ್ಲಿದ್ದಾರೆ ಎಂದರು.

ಗೋಕಾಕ ತಾಲೂಕಿನಲ್ಲಿ ಕಾಂಗ್ರೆಸ್ ಬೆಳೆಸಿ ರಮೇಶ ಜಾರಕಿಹೊಳಿ ಅವರ ಕೈಯಲ್ಲಿ ಕೊಟ್ಟಿದ್ದೆ. ಲೋಕಸಭೆ ಚುನಾವಣೆ ನಮಗೆ ಸೆಮಿಫೈನಲ್, ಮುಂದೆ ಫೈನಲ್ ಪಂದ್ಯ ನಡೆಯಲಿದೆ. 6 ತಿಂಗಳು ಅವಕಾಶ ಇದ್ದು ಸಿದ್ಧತೆ ಮಾಡಿಕೊಳ್ಳುತ್ತೇವೆ. ಫೈನಲ್ ಮ್ಯಾಚ್ ಬಗ್ಗೆ ನಮಗೆ ಹೆಚ್ಚು ಇಂಟ್ರೆಸ್ಟ್ ಎಂದು ತಿಳಿಸಿದರು.

ABOUT THE AUTHOR

...view details