ಕರ್ನಾಟಕ

karnataka

ETV Bharat / elections

ಲೋಕಸಮರಕ್ಕೆ ಸರ್ವಸಿದ್ಧತೆ: ರಾಜ್ಯದಲ್ಲಿದ್ದಾರೆ 100 ವರ್ಷ ದಾಟಿದ 5 ಸಾವಿರ ಮತದಾರರು!

ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ನಡೆಯಲಿರುವ ಮತದಾನದ ದಿನ ಹತ್ತಿರವಾಗುತ್ತಿದ್ದು ಚುನಾವಣಾ ಆಯೋಗ ಸರ್ವಸಿದ್ಧತೆಯೊಂದಿಗೆ ಸನ್ನದ್ಧವಾಗಿದೆ. ರಾಜ್ಯದಲ್ಲಿರುವ ಮತಗಟ್ಟೆಗಳು, ಮತದಾರರ ಸಂಖ್ಯೆ ಹಾಗು ಕಲ್ಪಿಸಲಾಗುತ್ತಿರುವ ವ್ಯವಸ್ಥೆಯ ಸಂಪೂರ್ಣ ಚಿತ್ರಣ ಇಲ್ಲಿದೆ.

ಚುನಾವಣಾ ನೋಡಲ್ ಅಧಿಕಾರಿ ಜಯವಿಭವ ಸ್ವಾಮಿ

By

Published : Apr 12, 2019, 8:39 PM IST

ಬೆಂಗಳೂರು:ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಉಳಿದಿರುವುದು 5 ದಿನಗಳು ಮಾತ್ರ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ, 28 ಲೋಕಸಭಾ ಕ್ಷೇತ್ರಗಳಲ್ಲಿ ಈ ಬಾರಿ 58,186 ಮತಗಟ್ಟೆಗಳನ್ನು ಸ್ಥಾಪಿಸುತ್ತಿದೆ.

ಕಳೆದ ಬಾರಿ ರಾಜ್ಯಾದ್ಯಂತ (2014ರ ಚುನಾವಣೆ) 54,265 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಚುನಾವಣೆಯಲ್ಲಿ 3,921 ಮತಗಟ್ಟೆಗಳನ್ನು ಹೆಚ್ಚುವರಿಯಾಗಿ ತೆರೆಯಲಾಗುತ್ತಿದೆ. ಒಟ್ಟು 639 ಸಖಿ, 39 ಎಥ್ನಿಕ್ (ಸಾಂಪ್ರದಾಯಿಕ ) ಬೂತ್ ಗಳನ್ನು ನಿರ್ಮಾಣ ಮಾಡಿರುವುದು ವಿಶೇಷವಾಗಿದೆ.

ಚುನಾವಣಾ ನೋಡಲ್ ಅಧಿಕಾರಿ ಜಯವಿಭವ ಸ್ವಾಮಿ

ಕ್ಷೇತ್ರವಾರು ಮತಗಟ್ಟೆ ವಿವರ:

ಮೊದಲ ಹಂತದ ಚುನಾವಣೆ- ಉಡುಪಿ-ಚಿಕ್ಕಮಗಳೂರು- 1837, ಹಾಸನ- 2235, ದಕ್ಷಿಣಕನ್ನಡ-1861, ಚಿತ್ರದುರ್ಗ-2161, ತುಮಕೂರು-1907, ಮಂಡ್ಯ- 2046, ಮೈಸೂರು- 2187, ಚಾಮರಾಜನಗರ- 2005, ಬೆಂಗಳೂರು ಗ್ರಾಮಾಂತರ- 2672, ಬೆಂಗಳೂರು ಉತ್ತರ- 2656, ಬೆಂಗಳೂರು ಕೇಂದ್ರ- 2082, ಬೆಂಗಳೂರು ದಕ್ಷಿಣ- 2131, ಚಿಕ್ಕಬಳ್ಳಾಪುರ-2284, ಕೋಲಾರ- 2100. ಎರಡನೇ ಹಂತದ ಚುನಾವಣೆಯಲ್ಲಿ ಚಿಕ್ಕೋಡಿ- 1885, ಬೆಳಗಾವಿ-2064, ಬಾಗಲಕೋಟೆ-1938, ಬಿಜಾಪುರ-2101, ಗುಲ್ಬರ್ಗ-2157, ರಾಯಚೂರು-2184, ಬೀದರ್-1999, ಕೊಪ್ಪಳ- 2033, ಬಳ್ಳಾರಿ-1925, ಹಾವೇರಿ- 1972, ಧಾರವಾಡ- 1872, ಉತ್ತರಕನ್ನಡ-1922, ದಾವಣಗೆರೆ-1949 ಹಾಗೂ ಶಿವಮೊಗ್ಗ-2021 ಮತಗಟ್ಟೆಗಳು ಸ್ಥಾಪಿಸಲಾಗುತ್ತದೆ.

ಕಣದಲ್ಲಿ 478 ಅಭ್ಯರ್ಥಿಗಳು

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಈ ಬಾರಿ ಒಟ್ಟು 478 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೊದಲ ಹಂತದಲ್ಲಿ 241 ಹಾಗೂ 2 ನೇ ಹಂತದಲ್ಲಿ 237 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

2011 ಜನಗಣತಿ ಪ್ರಕಾರ, ರಾಜ್ಯದಲ್ಲಿ ಒಟ್ಟು 6,11,30,704 ಜನಸಂಖ್ಯೆ ಇದ್ದು, ಅದರಲ್ಲಿ 5.11 ಕೋಟಿ ಮತದಾರರಿದ್ದಾರೆ. 2,58,43,271 ಪುರುಷರು, 2,52,54,508 ಮಹಿಳಾ ಮತದಾರರಿದ್ದು, 4,661 ಇತರರು ಸೇರಿ ಒಟ್ಟು 5,11,02,440 ಮತದಾರರಿದ್ದಾರೆ. 4,34,126 ವಿವಿಧ ರೀತಿಯ ವಿಕಲಚೇತನ ಮತದರಾರಿದ್ದಾರೆ.
ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 4 ಬ್ಯಾಲೆಟ್ ಬಳಕೆ ಮಾಡಲಾಗುತ್ತಿದೆ. 9 ಕ್ಷೇತ್ರದಲ್ಲಿ 2 ಬ್ಯಾಲೆಟ್ ಬಳಕೆ ಮಾಡಲಾಗುವುದು. ಇನ್ನುಳಿದ ಕ್ಷೇತ್ರದಲ್ಲಿ ಒಂದೊಂದು ಬ್ಯಾಲೆಟ್ ಬಳಕೆ ಮಾಡಲಾಗುತ್ತದೆ. ಒಂದು ಬ್ಯಾಲೆಟ್ ನಲ್ಲಿ 16 ಅಭ್ಯರ್ಥಿಗಳ ಹೆಸರು ನಮೂದಾಗಿರುತ್ತದೆ.

ನೂರು ವರ್ಷ ದಾಟಿದ ಮತದಾರರು !

ರಾಜ್ಯದಲ್ಲಿ ನೂರು ವರ್ಷದಾಟಿದ ಮತದಾರರು 5,580 ಮಂದಿ ಇದ್ದಾರೆ. 18 ರಿಂದ 19 ವರ್ಷದ ವಯೋಮಾನದ 10,09,167 ಮತದಾರರಿದ್ದರೆ, 20 ರಿಂದ 29 ವರ್ಷದವರು 1,07,65,072 ಮತದಾರರಿದ್ದಾರೆ. 30 ರಿಂದ 39 ವರ್ಷದವರು 1,33,87,297 ಮತದಾರರು ಇದ್ದಾರೆ. 40 ರಿಂದ 49 ವರ್ಷದವರು 1,04,28996 ಮತದಾರರು, 50 ರಿಂದ 59 ವರ್ಷದವರು 73,79,542 ಮತದಾರರು, 60 ರಿಂದ 69 ವರ್ಷದವರು 47,29,332 ಮತದಾರರು 70 ರಿಂದ 79 ವಯೋಮಾನದವರು 24,19,011 ಮತದಾರರು 80 ರಿಂದ 89 ವರ್ಷದವರು 7,87,893 ಮತದಾರರು 90 ರಿಂದ 99 ವರ್ಷದವರು 1,47,213 ಮತದಾರರು ಹಾಗು 100 ವರ್ಷದಾಟಿದ 5,580 ಮತದಾರರು ಇದ್ದಾರೆ.

ಸ್ಥಳಾವಕಾಶದ ಕೊರತೆಯ ಕಾರಣ ಹಲವೆಡೆ ಆರಕ್ಕೂ ಹೆಚ್ಚು ಪೋಲಿಂಗ್ ಬೂತ್ ನಿರ್ಮಾಣ ಮಾಡಲಾಗಿರುತ್ತದೆ. ಜೊತೆಗೆ ಭದ್ರತಾ ದೃಷ್ಟಿಯಿಂದಲೂ ಕೆಲವೊಮ್ಮೆ ಒಂದೇ ಕಡೆ ಐದಕ್ಕೂ ಹೆಚ್ಚು ಪೊಲಿಂಗ್ ಬೂತ್ ಗಳನ್ನು ಸ್ಥಾಪಿಸಲಾಗುತ್ತದೆ ಎಂದು ಚುನಾವಣಾ ನೋಡಲ್ ಅಧಿಕಾರಿ ಜಯವಿಭವ ಸ್ವಾಮಿ ಮಾಹಿತಿ ನೀಡಿದರು.

ಮತಗಟ್ಟೆಗಳಲ್ಲಿರುವ ವ್ಯವಸ್ಥೆ

ಪ್ರತಿ ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗಾಗಿ ರ್ಯಾಂಪ್ ನಿರ್ಮಾಣ, ವೀಲ್ ಚೇರ್, ವಾಹನ ಸೌಲಭ್ಯ ಕಲ್ಪಿಸಲಾಗುತ್ತದೆ.

ಕಳೆದ ಬಾರಿಯ ಅಂಕಿ ಅಂಶ:

2014 ರ ಲೋಕಸಭೆ ಚುನಾವಣೆಯಲ್ಲಿ 54,265 ಮತಗಟ್ಟೆಗಳಿದ್ದವು. ಒಟ್ಟು ಮತದಾರರ ಸಂಖ್ಯೆ 4,62,09,813. ಇವರಲ್ಲಿ ಪುರುಷ ಮತದಾರರ ಸಂಖ್ಯೆ 2,35,84,842. ಮಹಿಳಾ ಮತದಾರರು 2,26,21,081. ಇತರ ಮತದಾರರ ಸಂಖ್ಯೆ 3,890. ಕಳೆದ ಬಾರಿಯ ಚುನಾವಣೆ ವೇಳೆ 3,10,25,019 ಮತಚಲಾವಣೆ ಆಗಿತ್ತು. 1,61,48,545 ಪುರುಷರು ಹಾಗೂ 1,48,76,307 ಮಹಿಳೆಯರು ಮತದಾನ ಮಾಡಿದ್ದರು.ಒಟ್ಟು ಶೇ. 67.20 ರಷ್ಟು ಮತದಾನ ನಡೆದಿತ್ತು.

ABOUT THE AUTHOR

...view details