ಕರ್ನಾಟಕ

karnataka

ETV Bharat / elections

ರೇವಣ್ಣ ಈಗ್ಲೇ ನಿವೃತ್ತಿ ತೆಗೆದುಕೊಳ್ಳಲಿ, ಯಾಕಂದ್ರೆ ಮೋದಿ ಗೆಲ್ಲೋದು ಪಕ್ಕಾ: ಶೆಟ್ಟರ್​ - kannada news

ಬಿಜೆಪಿ ಸೈನ್ಯ ಮತ್ತು ಬಾಲಕೋಟ್ ದಾಳಿಯನ್ನ ತನ್ನ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ ಎಂಬ ವಿರೋಧ ವ್ಯಕ್ತವಾದ್ರೂ ಸಹ ಜಗದೀಶ್ ಶೆಟ್ಟರ್ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್

By

Published : Apr 12, 2019, 5:30 PM IST

ಗದಗ :ಬಿಜೆಪಿ ನಾಯಕರು ಪದೇ ಪದೆ ಸೈನ್ಯ ಮತ್ತು ಬಾಲಕೋಟ್ ದಾಳಿ ವಿಷಯವನ್ನು ಮೋದಿ ಹೆಸರಿನಲ್ಲಿ ಪ್ರಚಾರಕ್ಕೆ ಬಳಸಿಕೊಳ್ಳುವ ಬಗ್ಗೆ ಕಾಂಗ್ರೆಸ್ ನಾಯಕರು ಮತ್ತು ಸಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿರೋಧ ವ್ಯಕ್ತವಾದರೂ ಮತ್ತೆ ಗದಗದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ ಈ ವಿಷಯವನ್ನು ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದಾರೆ.

ಪುಲ್ವಾಮಾ ದಾಳಿಗೆ ಸೂಕ್ತ ಪ್ರತಿಕಾರ ಪ್ರಧಾನಿ ನರೇಂದ್ರ ಮೋದಿಯವರು ತಿರಿಸಿಕೊಂಡಿದ್ದಾರೆ, ಮೋದಿ ಪಾಕ್ ಗೆ ಎಚ್ಚರಿಕೆ ಕೊಟ್ಟ ಎರಡೇ ದಿನದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಲಾಯಿತು ಅಂತ ಗಜೇಂದ್ರಗಡ ಪಟ್ಟಣದಲ್ಲು ಹೇಳಿದ್ದಾರೆ‌‌‌.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್

ಇನ್ನು ಜೆಡಿಎಸ್ ಹಾಗೂ ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದ ಶೆಟ್ಟರ ಮೈತ್ರಿ ಸರ್ಕಾರದ ಸದಸ್ಯರು ಒಬ್ಬರಿಗೊಬ್ಬರು ಬೆನ್ನಿಗೆ ಚೂರಿ ಹಾಕೋ ಕೆಲಸ ಮಾಡ್ತಿದ್ದಾರೆ. ಮಹಾಮೈತ್ರಿ ಪಕ್ಷಗಳು ಅವರನ್ನು ಅವರೇ ಸೋಲಿಸ್ತಾರೆ ಎಂದು ವ್ಯಂಗ್ಯವಾಡಿದರು.

ರೇವಣ್ಣ ಮಾತಿಗೆ ಪ್ರತಿಕ್ರಿಯಿಸಿದ ಶೆಟ್ಟರ್, ಮೋದಿ ಅವರು ಮತ್ತೆ ಅಧಿಕಾರಿಕ್ಕೆ ಬಂದ್ರೆ ರಾಜಕೀಯ ನಿವೃತ್ತ ಆಗ್ತೀನಿ ಅಂದಿದ್ರು. ರೇವಣ್ಣ ಅವರೇ‌ ಈಗ್ಲೇ ನಿವೃತ್ತಿ ತಗೊಳಿ. ಯಾಕಂದ್ರೆ ಮೋದಿ ಗೆಲುವು ನಿಶ್ಚಿತ ಅಂತ ಕಿಚಾಯಿಸಿದ್ರು. ದೇವೇಗೌಡರೂ ಸಹ ಇದೇ ಬಗೆಯ ಹೇಳಿಕೆ ಕೊಟ್ಟಿದ್ರು. ಜೆಡಿಎಸ್ ಅಪ್ಪ ಮಕ್ಕಳ‌ ಪಾರ್ಟಿಯಾಗಿ, ಈಗ ಅಪ್ಪ ಮಕ್ಕಳು ಮೊಮ್ಮಕ್ಕಳ ಪಾರ್ಟಿ ಆಗಿದೆ ಎಂದು ವಾಗ್ದಾಳಿ ನಡೆಸಿದ್ರು.

ABOUT THE AUTHOR

...view details