ಕರ್ನಾಟಕ

karnataka

ETV Bharat / elections

ಕಾಂಗ್ರೆಸ್‌ನಲ್ಲಿರುವ ಒಳ್ಳೆಯವರು ಬಿಜೆಪಿ ಸೇರುತ್ತಾರೆ:ಮುನಿಸ್ವಾಮಿ ವಿಶ್ವಾಸ - kannada news

ಈ ಬಾರಿಯ ಚುನಾವಣೆಯಲ್ಲಿ ನಾನು ಕೋಲಾರದಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ನಾಯಕರೂ ಕೂಡ ಕಾರಣ ಎಂದು ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾಗಿರುವ ಮುನಿಸ್ವಾಮಿ ಹೇಳಿದರು. ಇದೇ ವೇಳೆ ಅವರು, ಕೈ ಪಕ್ಷದಲ್ಲಿರುವ ಒಳ್ಳೆಯವರು ಬಿಜೆಪಿ ಸೇರುತ್ತಾರೆ ಎಂಬ ಸುಳಿವು ಕೊಟ್ಟರು.

ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ

By

Published : May 24, 2019, 6:26 PM IST

ಬೆಂಗಳೂರು: ಬಿಜೆಪಿ ಸರ್ಕಾರ ರಚನೆಗೆ ಅಗತ್ಯವಿರುವಷ್ಟು ಶಾಸಕರನ್ನು ಕರೆ ತರುತ್ತೇನೆ ಎಂದು ನಾನು ಹೇಳಿಲ್ಲ ಎಂದು ಕೋಲಾರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಸ್ಪಷ್ಟಪಡಿಸಿದರು.

ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಪ್ರತಿಕ್ರಿಯೆ

ಯಡಿಯೂರಪ್ಪ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾರು ಯಾರೋ ಕಳ್ಳರು ಸುಳ್ಳರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಡಿ. ಮಾಜಿ ಶಾಸಕ ಸುಧಾಕರ್, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಮಾಜಿ ಶಾಸಕ ಮಂಜುನಾಥಗೌಡರಂಥ ಒಳ್ಳೆಯವರು ಇದ್ದಾರೆ, ಅವರೆಲ್ಲ ಬಿಜೆಪಿ ಸೇರುತ್ತಾರೆ ಎಂದಷ್ಟೇ ಹೇಳಿದ್ದೇನೆ ಎಂದು ಅಭಿಪ್ರಾಯಪಟ್ಟರು.

ಈ ಬಾರಿಯ ಚುನಾವಣೆಯಲ್ಲಿ ನಾನು ಕೋಲಾರದಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ನಾಯಕರೂ ಕೂಡ ಕಾರಣ.ಹಾಗೆಂದು ಅವರನ್ನೆಲ್ಲಾ ಬಿಜೆಪಿಗೆ ಕರೆ ತರುತ್ತೇನೆ ಎಂದು ಯಡಿಯೂರಪ್ಪನವರಿಗೆ ಯಾವ ಭರವಸೆಯನ್ನೂ ಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದರು.

ABOUT THE AUTHOR

...view details