ಬೆಂಗಳೂರು:ಎರಡನೇ ಹಂತದಲೋಕಸಭಾ ಚುನಾವಣೆಗೆ ಎರಡೇ ದಿನ ಬಾಕಿ. ಈ ಮಧ್ಯೆ ಐಟಿ ಅಧಿಕಾರಿಗಳು ಭರ್ಜರಿ ಭೇಟೆ ನಡೆಸಿದ್ದಾರೆ. ಒಂದೇ ದಿನ ಸುಮಾರು 4.5 ಕೋಟಿ ರೂಪಾಯಿ ಹಣ ವಶಪಡಿಸಿಕೊಂಡು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಕಾರಿನ ಟೈರ್‌ನೊಳಗಿತ್ತು ಕಂತೆ ಕಂತೆ ಹಣ! ಐಟಿ ಅಧಿಕಾರಿಗಳ ಭರ್ಜರಿ ಬೇಟೆ - kannada news
ರಾಜ್ಯದಲ್ಲಿ ಐಟಿ ಇಲಾಖೆ ದಾಳಿ ಮುಂದುವರೆಸಿದೆ. ಎರಡನೇ ಹಂತದ ಚುನಾವಣೆಗೆ ಎರಡು ದಿನಗಳಿರುವಾಗಲೇ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ, ಕೋಟಿಗಟ್ಟಲೆ ಹಣವನ್ನ ವಶಪಡಿಸಿಕೊಳ್ಳಲಾಗಿದೆ.
ಮತದಾರರಿಗೆ ಹಂಚಲು ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಸುಳಿವು ಪಡೆದು ಕಾರ್ಯಪ್ರವೃತ್ತರಾದ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಕಾರಿನ ಟೈರಿನೊಳಗೆ ಕಂತೆ ಕಂತೆ ಹಣವಿರುವುದು ಪತ್ತೆಯಾಗಿದೆ. ದಾಳಿ ವೇಳೆ ಗೋವಾ ಅಧಿಕಾರಿಗಳು ವಶಪಡಿಸಿಕೊಂಡಿದ್ದು ಬರೋಬ್ಬರಿ 2 ಕೋಟಿ 30 ಲಕ್ಷ ರೂಪಾಯಿ!
ರಾಜ್ಯದಲ್ಲೂ ಐಟಿ ಅಧಿಕಾರಿಗಳು ಶೋಧಕಾರ್ಯ ಮುಂದುವರೆಸಿದ್ದು, ಭದ್ರಾವತಿಯಲ್ಲಿ 60 ಲಕ್ಷ ಹಣ, ಬಾಗಲಕೋಟೆಯ ನವನಗರದಲ್ಲಿ ಬ್ಯಾಂಕ್ ಉದ್ಯೋಗಿ ಬಳಿ 1 ಕೋಟಿ ರೂ, ಗೋವಾದಲ್ಲಿ ಜ್ಯುವೆಲ್ಲರಿ ಅಂಗಡಿ ನಡೆಸುತ್ತಿದ್ದ ವಿಜಯಪುರದ ಇಬ್ಬರು ಸಹೋದರರ ಮನೆ ಮೇಲೆ ದಾಳಿ ಮಾಡಿ 40 ಲಕ್ಷ ರೂ ನಗದು ವಶಪಡಿಸಿಕೊಂಡಿದ್ದಾರೆ.