ಬೆಳಗಾವಿ:ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನೀತಿ ಸಂಹಿತೆ ಉಲ್ಲಂಘಿಸಿ ಮತಗಟ್ಟೆ ಬಳಿ ಮತಯಾಚಿಸಿದ ಕೈ ಶಾಸಕಿ..! - undefined
ಮತಗಟ್ಟೆ ಆವರಣದಲ್ಲಿ ನಿಂತು, 'ಇದೊಂದು ಬಾರಿ ನನ್ನ ನೋಡಿ ಮತ ಮಾಡಿ' ಎಂದು ಲಕ್ಷ್ಮೀ ಕೋರಿದ್ದಾರೆ ಎಂಬ ಆಪಾದನೆ ಕೇಳಿಬಂದಿದೆ.
ಮತಗಟ್ಟೆ ಬಳಿ ಮತದಾರರೊಂದಿಗೆ ಮಾತನಾಡುತ್ತಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ ಹಿಂಡಲಗಾ ಮತಗಟ್ಟೆ ಸಂಖ್ಯೆ 60ರಲ್ಲಿ ಹೆಬ್ಬಾಳ್ಕರ್ ಅವರು ಮತದಾನ ಮಾಡಿದರು. ಬಳಿಕ ಪಕ್ಕದ ವಿಜಯನಗರದಲ್ಲಿ ಸ್ಥಾಪಿಸಲಾಗಿದ್ದ
ವಿಜಯನಗರದ ಮತಗಟ್ಟೆ ಒಳಗೆ ಹೋಗಿದ್ದಾರೆ. ಮತದಾರರಿಗೆ ಕೈಮುಗಿದು ಇದೊಂದು ಬಾರಿ ಮತಹಾಕಿ ಎಂದು ಶಾಸಕಿ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತಗಟ್ಟೆಯಲ್ಲಿ ಓಡಾಡುತ್ತಿರುವುದು
ಮತ್ತೆ ಹೊರ ಬಂದ ಅವರು ಮತಗಟ್ಟೆ ಆವರಣದಲ್ಲಿ ನಿಂತು, 'ಇದೊಂದು ಬಾರಿ ನನ್ನ ನೋಡಿ ಮತ ಮಾಡಿ' ಎಂದು ಲಕ್ಷ್ಮೀ ಕೋರಿದ್ದಾರೆ ಎಂಬ ಆಪಾದನೆ ಕೇಳಿಬಂದಿದೆ.