ಉಡುಪಿ: ಎಲ್ಲೆಡೆ ಲೋಕಸಭಾ ಚುನಾವಣಾ ಪ್ರಚಾರ ಬಿರುಸುಗೊಂಡಿದೆ. ಹಾಗೇ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣಾ ಕಣ ಕೂಡಾ ದಿನದಿಂದ ದಿನಕ್ಕೆ ಕಾವೇರುತ್ತಿದೆ. ತಂದೆಯ ಗೆಲುವಿಗಾಗಿ ಲೋಕ ಸಮರದ ಪ್ರಚಾರಕ್ಕೆ ಪ್ರತ್ಯಕ್ಷಾ ಮಧ್ವರಾಜ್ ಕಾಲಿಟ್ಟಿದ್ದಾರೆ.
ತಂದೆಯ ಗೆಲುವುವಿಗಾಗಿ ಪುತ್ರಿ ಪ್ರತ್ಯಕ್ಷಾ ಮಧ್ವರಾಜ್ ಮತಯಾಚನೆ - kannada news
ಲೋಕಸಭಾ ಚುನಾವಣೆ ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಅಭ್ಯರ್ಥಿಗಳ ಕುಟುಂಬಸ್ಥರು ಕೂಡಾ ಪ್ರಚಾರಕ್ಕಿಳಿದು ಮತಯಾಚಿಸುತ್ತಿದ್ದಾರೆ.
ಮೈತ್ರಿ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ರವರ ಮಗಳು ಪ್ರತ್ಯಕ್ಷಾ ತನ್ನ ತಂದೆಯ ಪರ ಪ್ರಚಾರ
ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರ ಮಗಳು ಪ್ರತ್ಯಕ್ಷಾ ತನ್ನ ತಂದೆಯ ಪರ ಪ್ರಚಾರಕ್ಕೆ ಧುಮುಕಿದ್ದಾರೆ. ಉಡುಪಿ, ಕಾರ್ಕಳ ಕ್ಷೇತ್ರದಲ್ಲಿರುವ ಗೇರುಬೀಜ ಫ್ಯಾಕ್ಟರಿ, ಮೀನಿನ ಬಲೆ ತಯಾರಿಕಾ ಫ್ಯಾಕ್ಟರಿಯಲ್ಲಿ ಮತಯಾಚನೆ ನಡೆಸಿದ್ರು.
ಕ್ರಮ ಸಂಖ್ಯೆ ಎರಡರಲ್ಲಿರುವ ತೆನೆ ಹೊತ್ತ ಮಹಿಳೆಗೆ ಮತ ನೀಡಿ, ನನ್ನ ತಂದೆಯನ್ನು ಸಂಸದರನ್ನಾಗಿ ಮಾಡಿ ಎಂದು ಪ್ರತ್ಯಕ್ಷಾ ಮತದಾರರಲ್ಲಿ ವಿನಂತಿಸಿದ್ದರು.