ನನಗೆ ಸರಿಯಾಗಿ ಕಪಾಳಮೋಕ್ಷ ಆಗಿದೆ: ನಟ ಪ್ರಕಾಶ್ ರೈ ಟ್ವೀಟ್ - Kannada news
ಲೋಕಸಭೆ ಚುನಾವಣೆಯಿಂದ ಅತ್ಯಂತ ಕಡಿಮೆ ಮತಗಳನ್ನು ಪಡೆದು ಪರಾಭವಗೊಂಡ ನಟ ಪ್ರಕಾಶ್ ರೈ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಟ ಪ್ರಕಾಶ್ ರಾಜ್
ಬೆಂಗಳೂರು : ಲೋಕಸಭಾ ರಿಸಲ್ಟ್ ಹೊರ ಬೀಳುತ್ತಿದ್ದಂತೆ ಪ್ರಕಾಶ್ ರೈ ಟ್ವೀಟ್ ಮಾಡಿದ್ದು, ನನಗೆ ಸರಿಯಾಗಿ ಕಪಾಳಮೋಕ್ಷ ಆಗಿದೆ. ಇನ್ನೀಗ ನಿಂದನೆ, ಅವಮಾನಗಳು ನನಗೆ ಕಾದಿವೆ. ಅದೆಲ್ಲಕ್ಕೂ ಸಿದ್ಧನಾಗಿದ್ಧೇನೆ. ಜಾತ್ಯಾತೀತ ಭಾರತಕ್ಕಾಗಿ ಹೋರಾಡುವ ನನ್ನ ಬದ್ಧತೆ ಮುಂದುವರಿಯಲಿದೆ. ಕಠಿಣ ಪ್ರಯಾಣ ಈಗಷ್ಟೇ ಆರಂಭವಾಗಿದೆ. ನನ್ನ ಈ ಪಯಣದಲ್ಲಿ ಜೊತೆಗಿದ್ದವರಿಗೆ ಧನ್ಯವಾದ ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.
Last Updated : May 23, 2019, 4:14 PM IST