ಹುಬ್ಬಳ್ಳಿ :ಪ್ರಹ್ಲಾದ್ ಜೋಶಿಯವರಿಗೆ ಸಮಾಜದ ನಡುವೆ ಬೆಂಕಿ ಹಚ್ಚುವ ಕೆಲಸ ಬಿಟ್ಟರೆ ಬೇರೇ ಏನೂ ಗೊತ್ತಿಲ್ಲ, ಎಂದು ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ಸಂಸದ ಪ್ರಹ್ಲಾದ್ ಜೋಶಿ ವಿರುದ್ದ ಕಿಡಿಕಾರಿದರು.
ಧೈರ್ಯ ಇದ್ರೆ ಆರ್ಎಸ್ಎಸ್ ಕಚೇರಿಯಲ್ಲಿ ಬಸವಣ್ಣನ ಫೋಟೊ ಹಾಕಲಿ: ವಿನಯ್ ಕುಲಕರ್ಣಿ ಸವಾಲು - kannada news paper
ವಿನಯ್ ಕುಲಕರ್ಣಿ ಮತ್ತು ಪ್ರಹ್ಲಾದ್ ಜೋಶಿಯ ನಡುವೆ ವಾಕ್ ಸಮರ ಶುರುವಾಗಿದ್ದು, ಆರೋಪ ಪ್ರತ್ಯಾರೋಪ ಕೇಳಿಬರುತ್ತಿದೆ.
ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ
ನಗರದ ಗೋಕುಲ್ ಗಾರ್ಡನ್ ನಲ್ಲಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿ, ಜೋಶಿಯವರು ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ, ಸಮಾಜವನ್ನ ಒಗ್ಗೂಡಿಸುವ ಕೆಲಸ ಅವರಿಗೆ ಗೊತ್ತಿಲ್ಲ, ಬಸವಣ್ಣನವರನ್ನ ಪೋಟೊ ಪೂಜೆ ಮಾಡೊ ಜೋಶಿಯವರ ಆಚಾರವಿಚಾರಗಳು ಬಸವಣ್ಣನವರ ಆಚಾರವಿಚಾರಗಳಿಗೆ ತದ್ವಿರುದ್ಧವಾಗಿವೆ, ಧೈರ್ಯ ಇದ್ದರೆ ಬಿಜೆಪಿಯವರು ಆರ್.ಎಸ್.ಎಸ್ ಕಚೇರಿಯಲ್ಲಿ ಬಸವಣ್ಣನವರ ಫೋಟೋ ಹಾಕಲಿ ಎಂದು ಸವಾಲು ಹಾಕಿದರು.