ರಾಯಚೂರು: ಚುನಾವಣೆ ಪ್ರಚಾರಕ್ಕೆಂದು ಸ್ಟಾರ್ ನಾಯಕರು ಬರೋದು ಸಾಮಾನ್ಯ. ಆದ್ರೆ, ಇತ್ತೀಚೆಗೆ ಅಭ್ಯರ್ಥಿಗಳ ಪತ್ನಿಯರು ಸಹ ಚುನಾವಣಾ ಪ್ರಚಾರ ಅಖಾಡಕ್ಕೆ ಕಾಲಿಡುತ್ತಿದ್ದಾರೆ. ಅಲ್ಲದೆ, ಅವರ ಗೆಲುವಿಗಾಗಿ ಮತ ಯಾಚಿಸುತ್ತಿದ್ದಾರೆ.
ಪತಿಯ ಗೆಲುವಿಗೆ ಪಣ ತೊಟ್ಟ ಪದ್ಮಾವತಿ - kannada news
ಲೋಕಸಭೆ ಚುನಾವಣೆ ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇತ್ತ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ ಧರ್ಮ ಪತ್ನಿ ಪದ್ಮಾವತಿ ಪ್ರಚಾರದ ಕಣಕ್ಕೆ ಧುಮುಕ್ಕಿದ್ದಾರೆ.
![ಪತಿಯ ಗೆಲುವಿಗೆ ಪಣ ತೊಟ್ಟ ಪದ್ಮಾವತಿ](https://etvbharatimages.akamaized.net/etvbharat/images/768-512-2946476-thumbnail-3x2-padma.jpg)
ಲಿಂಗಸೂಗೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ಧರ್ಮ ಪತ್ನಿ ಪದ್ಮಾವತಿ
ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ ಧರ್ಮ ಪತ್ನಿ ಪದ್ಮಾವತಿ ಅವರು ಪತಿಯ ಗೆಲುವಿಗೆ ಪಣತೊಟ್ಟಿದ್ದು, ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಗುರುಗುಂಟಾದ ಶ್ರೀ ಅಮರೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ನೇರವೇರಿಸಿದರು. ಬಳಿಕ, ಲಿಂಗಸೂಗೂರು ಪಟ್ಟಣದ ಕಾಂಗ್ರೆಸ್ ಮುಖಂಡರ ಮನೆಗಳಿಗೆ ಮತ್ತು ನಾನಾ ವಾರ್ಡ್‌ಗಳಿಗೆ ಭೇಟಿ ನೀಡುವ ಮೂಲಕ ಪತಿಯ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು.
ಇಷ್ಟು ದಿನಗಳ ಕಾಲ ಅಭ್ಯರ್ಥಿಗಳ ಪರ ಆಯಾ ಪಪಕ್ಷಗಳ ಮುಖಂಡರು ಮತಬೇಟೆ ಶುರು ಮಾಡಿದ್ದಾರೆ. ಇದೀಗ ಅಭ್ಯರ್ಥಿಗಳ ಪರವಾಗಿ ಅವರ ಧರ್ಮಪತ್ನಿಯರು ಪ್ರಚಾರ ಮಾಡುತ್ತಿರುವುದು ವಿಶೇಷವಾಗಿ ಗಮನ ಸೆಳೆದಿದೆ.