ಮೈಸೂರು :ಮಂಡ್ಯ ಲೋಕಸಭಾ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಸಚಿವ ಸಾ.ರಾ.ಮಹೇಶ್, ಅಭಿಷೇಕ್ ಅಂಬರೀಶ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಹೋಮ ಹವನದಿಂದ ಗೆಲುವುದಿಲ್ಲ ಎಂಬ ಅಭಿಷೇಕ್ ಅಂಬರೀಶ್ ಹೇಳಿಕೆಗೆ ಮೈಸೂರಿನ ಮಾಧ್ಯಮಗಳೊಂದಿಗೆ ಮಾತನಾಡಿದ ಸಾ.ರಾ.ಮಹೇಶ್, ಮೇ.23ರಂದು ಯಾರು ಗೆಲ್ಲುತ್ತಾರೆ ಎಂಬುವುದು ಅವರಿಗೆ ಗೊತ್ತಾಗಲಿದೆ. ಒಂದೂವರೆ ಲಕ್ಷ ಮತಗಳ ಅಂತರದಿಂದ ನಿಖಿಲ್ ಗೆದ್ದೆ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ, ಮೇ 23 ರ ಫಲಿತಾಂಶದ ನಂತರವೂ ಮೈತ್ರಿ ಗಟ್ಟಿಯಾಗಿರುತ್ತದೆ. ಚುನಾವಣ ಫಲಿತಾಂಶದ ನಂತರ ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆಯಾಗುತ್ತದೆ, ಪ್ರಧಾನಮಂತ್ರಿ ಬೇರೆ ಆಗ್ತಾರೆ, ಮಂಡ್ಯದ ರಿಸ್ಟಲ್ ಎನಾಗಿದ್ದರೂ ಕೂಡಾ ಸರ್ಕಾರದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ನಿಖಿಲ್ ಕುಮಾರಸ್ವಾಮಿ ಒಂದೂವರೆ ಲಕ್ಷದ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಮಡಿಕೇರಿಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ಹಾಹಾಕಾರ ಇಲ್ಲ. ಮಳೆಯಿಂದ ಸಂತ್ರಸ್ತಗೊಂಡ ಜನರ ಮನೆ ನಿರ್ಮಾಣದ ಮೊದಲ ಹಂತದ ಕಾರ್ಯ ಮುಗಿದಿದೆ. ಅಲ್ಲಿಗೆ ಮೂಲಭೂತ ಸೌಕರ್ಯಗಳನ್ನು ನೀಡುವುದಷ್ಟೇ ಬಾಕಿ ಇದೆ ಫಲಿತಾಂಶದ ನಂತರ ಮುಂದಿನ ದಿನಾಂಕ ಘೋಷಣೆ ಮಾಡಿ ಅವರಿಗೆ ಮನೆಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ವಿಶ್ವನಾಥ್ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿ, ಇದು ಅವರವರ ವೈಯಕ್ತಿಕ ರಾಜಕಾರಣದ ಹೇಳಿಕೆಗಳು ಅಷ್ಟೇ, ಅವರಿಬ್ಬರು ಹಿರಿಯರು ಇದ್ದಾರೆ, ಅವರವರ ವೈಯಕ್ತಿಕ ಹೇಳಿಕೆಗಳಿಗೆ ನಾನು ಏನು ಹೇಳೊದಿಲ್ಲ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಅನ್ನೋದು ಅವರ ಪಕ್ಷದ ನಾಯಕರ ಅಭಿಪ್ರಾಯ, ಈ ಮೈತ್ರಿ ಸರ್ಕಾರವನ್ನ ಹೆಚ್ ಡಿ ದೇವೇಗೌಡರು ಮತ್ತು ರಾಹುಲ್ ಗಾಂಧಿ ರಚನೆ ಮಾಡಿದ್ದಾರೆ.
ಹೀಗಾಗಿ ಇವರಿಬ್ಬರ ವಾಕ್ ಸಮರದಿಂದ ಮೈತ್ರಿ ಸರ್ಕಾರಕ್ಕೆ ಡ್ಯಾಮೇಜ್ ಆಗೋದಿಲ್ಲ ಸದ್ಯಕ್ಕೆ ಮುಖ್ಯಮಂತ್ರಿಗಳ ಕುರ್ಚಿ ಖಾಲಿ ಇಲ್ಲ. ಮುಂದಿನ ಚುನಾವಣೆಗೆ ಬೇಕಾದ್ರೆ ನೋಡೋಣ, ಸದ್ಯ ಉಳಿದ ನಾಲ್ಕು ವರ್ಷ ಕುಮಾರಸ್ವಾಮಿಯೇ ಮುಖ್ಯಮಂತ್ರಿ ಆಗಿರುತ್ತಾರೆ. ಮುಂದಿನ ಮೈಸೂರು ದಸರಾವನ್ನು ಕುಮಾರಸ್ವಾಮಿಯೇ ಉದ್ಘಾಟಿಸುತ್ತಾರೆ ಭವಿಷ್ಯ ನುಡಿದರು.