ಕರ್ನಾಟಕ

karnataka

ETV Bharat / elections

ಇಂಡೊ-ಪಾಕ್ ಪ್ರಧಾನಿಗಳ ನಡುವೆ ಮ್ಯಾಚ್ ಫಿಕ್ಸಿಂಗ್ : ಬಿ.ಎಂ ಫಾರೂಕ್ ಆರೋಪ

ಮೋದಿ ಮತ್ತೆ ಪ್ರಧಾನಿಯಾಗಲಿ ಎಂಬ ಪಾಕ್ ಪ್ರಧಾನಿ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸುತ್ತಿದ್ದು ಕೈ ನಾಯಕರ ವಾಗ್ದಾಳಿ ತೀವ್ರಗೊಂಡಿದೆ.

ವಿಧಾನ ಪರಿಷತ್ ಸದಸ್ಯ ಬಿ ಎಂ ಫಾರೂಕ್

By

Published : Apr 11, 2019, 9:18 PM IST

ತುಮಕೂರು: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವೆ ಮ್ಯಾಚ್ ಫಿಕ್ಸಿಂಗ್ ಆಗಿದ್ದು, ಕಣಿವೆ ರಾಜ್ಯದ ಮುಸಲ್ಮಾನ್ ಸಮುದಾಯದವರಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಎಂ ಫಾರೂಕ್ ಆರೋಪಿಸಿದ್ದಾರೆ.

ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಪ್ರಧಾನಿ ಮೋದಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಚೌಕಿದಾರ್ ಎಂದು ಹೇಳಿಕೊಳ್ಳುವ ಪ್ರಧಾನಿ, ದೇಶದಲ್ಲಿ ವಿವಿಧ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ಮೋಸ ಮಾಡಿ ಓಡಿ ಹೋಗಿರುವ ನೀರವ್ ಮೋದಿ ಹಾಗೂ ಲಲಿತ್ ಮೋದಿ ಕುತಂತ್ರವನ್ನು ತಡೆಗಟ್ಟದೇ ನಿದ್ರೆ ಮಾಡುತ್ತಿದ್ದರೆ ? ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್ ಸದಸ್ಯ ಬಿ ಎಂ ಫಾರೂಕ್

ನೋಟು ಅಮಾನ್ಯೀಕರಣ ವ್ಯವಸ್ಥೆ ಜಾರಿಗೆ ತಂದಾಗ ಲಕ್ಷಾಂತರ ಜನ ನಿರುದ್ಯೋಗಿಗಳಾದರು. ಸ್ವಿಸ್ ಬ್ಯಾಂಕುಗಳಿಂದ ಕಪ್ಪುಹಣ ತಂದು ದೇಶದ ಪ್ರತಿಯೊಬ್ಬ ಪ್ರಜೆಯ ಖಾತೆಗೆ ಹದಿನೈದು ಲಕ್ಷ ರೂ ಜಮೆ ಮಾಡುವುದಾಗಿ ಹೇಳಿದ್ದ ಮೋದಿ ನಯಾ ಪೈಸೆಯನ್ನು ಕೊಟ್ಟಿಲ್ಲ ಎಂದು ಇದೇ ವೇಳೆ ಅವರು ಟೀಕಿಸಿದರು.

ಇನ್ನು ಮುಂದುವರೆದು ಮಾತನಾಡುತ್ತಾ ಅವರು, 45 ಸಾವಿರ ಕೋಟಿ ರೂ ಮೊತ್ತದ ರಫೇಲ್ ಹಗರಣದ ದಾಖಲೆಗಳು ಕಳೆದು ಹೋಗಿದೆ ಎಂದಾಗ ಚೌಕಿದಾರ್ ಎಲ್ಲಿ ಹೋಗಿದ್ದರು ಎಂದರು.

ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವಿದೆ. ಅಲ್ಲಿ ಒಂದು ರೀತಿ ಯುದ್ಧದ ಭೀತಿಯಲ್ಲಿ ಜನ ಬದುಕುತ್ತಿದ್ದಾರೆ. ಪುಲ್ವಾಮಾ ದಾಳಿಯಲ್ಲಿ ಸೈನಿಕರು ವೀರ ಮರಣವನ್ನಪ್ಪಿದಾಗ ಚೌಕಿದಾರ್ ಎಲ್ಲಿ ಹೋಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಶ್ನೆಗಳ ಸುರಿಮಳೆಗೈದರು.

ABOUT THE AUTHOR

...view details