ತುಮಕೂರು:ಲೋಕಸಭಾ ಚುನಾವಣೆಯಲ್ಲಿ ಯಾವುದೇ ಭಾವನಾತ್ಮಕ ಸಂಬಂಧಗಳಿರುವುದಿಲ್ಲ. ಕೇವಲ ಯುದ್ಧ ನೀತಿಯನ್ನು ಮಾತ್ರ ಅನುಸರಿಸುತ್ತಿದ್ದೇನೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಜಯ ಗಳಿಸುತ್ತಾರೆ ಎಂದು ಸಚಿವೆ ಜಯಮಾಲಾ ವಿಶ್ವಾಸ ವ್ಯಕ್ತಪಡಿಸಿದರು.
ಮಂಡ್ಯ ಲೋಕಸಭೆ ವಾರ್... ನಿಖಿಲ್ ಪರ ಬ್ಯಾಟ್ ಬೀಸಿದ ಜಯಮಾಲಾ - kannada news
ಮಂಡ್ಯ ಲೋಕಸಭೆ ಚುನಾವಣೆ ಬಗ್ಗೆ ಸಚಿವೆ, ನಟಿ ಜಯಮಾಲಾ ಪ್ರತಿಕ್ರಿಯೆ ನೀಡಿದ್ದು, ನಿಖಿಲ್ ಪರ ಬ್ಯಾಟ್ ಬೀಸಿದ್ದಾರೆ.
ಸಚಿವೆ ಜಯಮಾಲಾ
'ಈಟಿವಿ ಭಾರತ್'ಗೆ ವಿಶೇಷ ಸಂದರ್ಶನ ನೀಡಿದ ಅವರು, ಸುಮಲತಾ ಅಂಬರೀಶ್ ಅವರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಅವ್ರು ನಮ್ಮ ಪಕ್ಷದವರಲ್ಲ. ಅಂಬರೀಶ್ ನಮ್ಮ ಕಾಂಗ್ರೆಸ್ ಪಕ್ಷದವರಾಗಿದ್ದರು. ನನಗೆ ಪಕ್ಷ ನಿಷ್ಠೆ ಇದೆ. ನಮ್ಮ ಪಕ್ಷದಲ್ಲಿರುವವರ ಬಗ್ಗೆ ಕೇಳಿದ್ರೆ ಪ್ರತಿಕ್ರಿಯಿಸುತ್ತೇನೆ ಎಂದರು.