ಕರ್ನಾಟಕ

karnataka

ETV Bharat / elections

ಸಿಎಂ ವಾಸ್ತವ್ಯ ಹೂಡಿದ್ದ ಹೋಟೆಲ್ ಮೇಲೂ ಐಟಿ ದಾಳಿ... ಸಿಸಿಟಿವಿಯ ಡಿವಿಆರ್ ವಶಕ್ಕೆ

ಸಿ.ಎಂ ಕುಮಾರಸ್ವಾಮಿ ತಂಗಿದ್ದ ಹೋಟೆಲ್ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸಿಬ್ಬಂದಿಯನ್ನು ವಿಚಾರಣೆ ನಡೆಸಿ ಹಲವು ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ.

ಸಿ.ಎಂ ವಾಸ್ತವ್ಯ ಹೂಡಿದ್ದ ಹೋಟೆಲ್ ಮೇಲೆ ಐಟಿ ದಾಳಿ

By

Published : Apr 4, 2019, 6:16 PM IST

ಮಂಡ್ಯ: ಜಿಲ್ಲೆಯಲ್ಲಿ ಐಟಿ‌ ಅಧಿಕಾರಿಗಳ ದಾಳಿ ಮುಂದುವರೆದಿದೆ. ಕೆ.ಆರ್.ಎಸ್‌ನಲ್ಲಿ ಸಿಎಂ ಕುಮಾರಸ್ವಾಮಿ ಉಳಿದುಕೊಂಡಿದ್ದ ಖಾಸಗಿ ಹೋಟೆಲ್ ಮೇಲೆ ದಾಳಿ ನಡೆಸಿ ತಪಾಸಣೆ ಮಾಡಿದ್ದಾರೆ.

ಕೆ.ಆರ್.ಎಸ್. ಬೃಂದಾವನದಲ್ಲಿರುವ ಪ್ರಸಿದ್ಧ ರಾಯಲ್ ಆರ್ಕೀಡ್ ಹೋಟೆಲ್ ಮೇಲೆ ದಾಳಿ ಮಾಡಿದ ಐಟಿ ಅಧಿಕಾರಿಗಳು, ದಾಖಲೆಗಳನ್ನ ಪರಿಶೀಲಿಸಿ ತೆರಳಿದ್ದಾರೆ. ಮೈಸೂರಿನ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು ಎಂದು ಹೇಳಲಾಗ್ತಿದೆ.

ಸಿ.ಎಂ ವಾಸ್ತವ್ಯ ಹೂಡಿದ್ದ ಹೋಟೆಲ್ ಮೇಲೆ ಐಟಿ ದಾಳಿ

ಇತ್ತೀಚೆಗಷ್ಟೇ ಸಿ.ಎಂ‌ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿ ಜಿಲ್ಲೆಯ ಶಾಸಕ ಸಚಿವರ ಜೊತೆ ಸಭೆ ನಡೆಸಿದ್ರು. ಚುನಾವಣೆ ಸಂಬಂಧ ಇದೇ ಹೋಟೆಲ್‌ನಲ್ಲಿ ಸಭೆ ಮಾಡಿ ಯೋಜನೆ ರೂಪಿಸಲಾಗಿತ್ತು ಎನ್ನಲಾಗ್ತಿದೆ.

ಸಿ.ಎಂ‌ ಉಳಿದುಕೊಂಡಿದ್ದ ಕೊಠಡಿ ಸೇರಿದಂತೆ ಅಧಿಕಾರಿಗಳನ್ನು ಹೋಟೆಲ್ ತಪಾಸಣೆ ಮಾಡಿದ್ದಾರೆ. ಹೋಟೆಲ್​ನ ಸಿಬ್ಬಂದಿಯನ್ನು ವಿಚಾರಿಸಿ ಮಾಹಿತಿ ಪಡೆದುಕೊಮಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ,ಆ ದಿನದ ಸಿಸಿಟಿವಿಯ ಡಿವಿಆರ್ ಸೇರಿದಂತೆ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details