ಕೋಲಾರ: ಕೆಲವರು ಹೆಣ್ಣು ಮಕ್ಕಳ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ. ಇವರು ನಿಜವಾದ ಶ್ರೀರಾಮನ ಆದರ್ಶ ಪಾಲಿಸುವುದೇ ಆದ್ರೇ, ಕ್ಷೇತ್ರ ಬಿಟ್ಟು ಕೊಟ್ಟು ಮಗನನ್ನ ಕಾಡಿಗೆ ಕಳುಹಿಸಿಬೇಕಿತ್ತು ಎಂದು ಪರೋಕ್ಷವಾಗಿ ಸಿಎಂ ಹೆಸರು ಹೇಳದೇ ಶ್ರೀರಾಮಸೇನೆ ಮುಖಂಡೆ ಚೈತ್ರ ಕುಂದಾಪುರ ವಾಗ್ದಾಳಿ ನಡೆಸಿದರು.
ರಾಮಮಂದಿರಕ್ಕೆ ಹೋರಾಡಿದವರೆಲ್ಲ ಸ್ವಾತಂತ್ರ ಹೋರಾಟಗಾರರು- ಚೈತ್ರಾ ಕುಂದಾಪುರ
ನಿಜವಾದ ಶ್ರೀರಾಮನ ಆದರ್ಶ ಪಾಲಕರಾದ್ರೇ, ಕ್ಷೇತ್ರ ಬಿಟ್ಟು ಕೊಟ್ಟು ಮಗನನ್ನ ಕಾಡಿಗೆ ಕಳುಹಿಸಬೇಕಿತ್ತು ಎಂದು ಮಂಡ್ಯ ಸ್ವಾಭಿಮಾನ ರಾಜಕಾರಣದ ಬಗ್ಗೆ ಚೈತ್ರಾ ಕುಂದಾಪುರ ಗುಡುಗಿದ್ದಾರೆ.
ಕೋಲಾರ ನಗರದಲ್ಲಿ ಶ್ರೀ ರಾಮ ಸೇನಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀರಾಮೋತ್ಸವದಲ್ಲಿ ಮಾತನಾಡಿದ ಅವರು, ಸಾಧ್ಯವಾದ್ರೇ ರಾಮನ ಆದರ್ಶಗಳನ್ನ ಪಾಲಿಸೋಣ. ಆದರೆ, ಕೆಲವರು ಹೆಣ್ಣು ಮಕ್ಕಳ ಬಗ್ಗೆ ಕೇವಲವಾಗಿ ಮಾತಾಡುತ್ತಿದ್ದಾರೆ. ಇವರು ನಿಜವಾಗಲೂ ಶ್ರೀರಾಮನ ಆದರ್ಶಗಳನ್ನ ಪಾಲಿಸುವುದಿದ್ರೇ ಒಂದೊಂದು ಕ್ಷೇತ್ರ ಬಿಟ್ಟು ಕೊಡುವ ಬದಲಾಗಿ ಕಾಡಿಗೆ ಕಳಹಿಸಿದ್ರೇ ಚೆನ್ನಾಗಿತ್ತು ಎಂದು ಮಂಡ್ಯದಲ್ಲಿ ನಡೆಯುತ್ತಿರುವ ಸ್ವಾಭಿಮಾನ ಹಾಗೂ ಕುಟುಂಬ ರಾಜಕಾರಣವನ್ನ ತೀಕ್ಷಣವಾಗಿ ಟೀಕಿಸಿದ್ರು.
ದಶರಥ ಮಗನನ್ನ ಕಾಡಿಗೆ ಕಳುಹಿಸಿದ್ದರಿಂದಲೇ ಮಗ ರಾಮನಾದ, ಇಲ್ಲವಾಗಿದಿದ್ರೇ ರಾವಣ ಆಗುತ್ತಿದ್ದ ಎಂದು ಸದ್ಯದ ಮಂಡ್ಯದ ರಾಜಕಾರಣವನ್ನ ಉದಾಹರಣೆಯಾಗಿ ನೀಡಿದ್ರು. ಶ್ರೀರಾಮನ ಬಗ್ಗೆ, ರಾಮನ ಚೆರಿತ್ರೆ ಬಗ್ಗೆ ಅವಹೇಳನ ಮಾಡುವವರನ್ನ ಕೊಲ್ಲಬೇಡಿ, ಅದು ನಮ್ಮ ಸಂಸ್ಕೃತಿ ಅಲ್ಲ, ಅವರನ್ನ ಸಾಮಾಜಿಕ ಬಹಿಷ್ಕಾರ ಹಾಕಿ ಎಂದು ಚೈತ್ರ ಕುಂದಾಪುರ ಹೇಳಿದ್ರು. ಅಲ್ಲದೆ ರಾಮ ಮಂದಿರದ ಹೋರಾಟದಲ್ಲಿ ಯಾರೆಲ್ಲಾ ಬಾಗಿಯಾಗ್ತಾರೋ, 1947 ನಂತರ ರಾಮ ಮಂದಿರಕ್ಕೆ ಹೋರಾಟ ಮಾಡುತ್ತಿರುವವರೆಲ್ಲಾ ಸ್ವತಂತ್ರ್ಯ ಹೋರಾಟಗಾರರೆ ಎಂದರು.