ಕರ್ನಾಟಕ

karnataka

ETV Bharat / elections

ನಾನು ಇನ್ಮುಂದೆ ಎಲೆಕ್ಷನ್‌ಗೆ ನಿಲ್ಲಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ - kannada news

ನಂಗೆ ಚುನಾವಣೆ ಇಷ್ಟ ಇಲ್ಲ. ಇನ್ಮುಂದೆ ಎಲೆಕ್ಷನ್​ಗೆ ನಿಲ್ಲಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

By

Published : Apr 15, 2019, 7:52 AM IST

ಮೈಸೂರು:ನಾನು ಇನ್ಮುಂದೆ ಚುನಾವಣೆಗೆ ನಿಲ್ಲಲ್ಲ. ಇನ್ನು ಮುಖ್ಯಮಂತ್ರಿ ಅಗೋದು ಎಲ್ಲಿಂದ ಬಂತು? ಚುನಾವಣೆ ಮೇಲೆ ಆಸಕ್ತಿ ಕಡಿಮೆ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರಿನ ಇಲವಾಲ ಗ್ರಾಮದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಪ್ರಚಾರ ಸಮಾವೇಶದಲ್ಲಿ ಸಿದ್ದರಾಮಯ್ಯ ಮಾತನಾಡಿ, ಕಾರ್ಯಕರ್ತನೋರ್ವ ನೀವು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದ್ದಕ್ಕೆ, ನಾನು ಎಲೆಕ್ಷನ್​ಗೆ ನಿಲ್ಲಲ್ಲ. ರಾಹುಲ್​ ಗಾಂಧಿ ಪ್ರಧಾನಿ ಆದ್ರೆ ಸಾಕು ಅಂತ ಓಡಾಡುತ್ತಾ ಇದೀನಿ. ನಂಗೆ ಈ ಲೋಕಸಭಾ ಚುನಾವಣೆಯಲ್ಲಿ ನಿಲ್ಲಿ ಅಂತಾ ಹೇಳಿದ್ರು ನಾನೇ ಬೇಡ ಅಂತಾನೇ ಹೇಳಿದೆ. ನಂಗೆ ಚುನಾವಣೆ ಸಾಕಾಗಿ ಹೋಗಿದೆ. ನಾನು ಚುನಾವಣೆಗೆ ನಿಲ್ಲಲ್ಲ. ಆದ್ರೆ ಬಿಜೆಪಿ ವಿರುದ್ಧ ಹೋರಾಟ ಮಾಡೋದನ್ನ ನಿಲ್ಲಿಸಲ್ಲ ಎಂದ್ರು.

ನಮ್ಮ ಎಂಎಲ್​​ಎಗಳನ್ನ ಹಿಡಿದುಕೊಳ್ಳದಿದ್ದರೆ ಇವತ್ತು ಮೈತ್ರಿ ಸರ್ಕಾರ ಏನ್ ಆಗ್ತಿತ್ತು? ಇಪ್ಪತ್ತೈದು ಮಂದಿ ಎಂಎಲ್​ಎಗೆ ತಲಾ 25 ಕೋಟಿ ರೂ. ಆಫರ್ ಕೊಟ್ಟಿದ್ರು ಈ ಬಿಜೆಪಿಯವರು. ಶಾಸಕ ಶ್ರೀನಿವಾಸ್ ಗೌಡನಿಗೆ 5 ಕೋಟಿ ರೂ. ಕೊಟ್ಟಿದ್ರು. ಆ ಮೇಲೆ ಅವನಿಗೆ ವಾಪಸ್ ಮಾಡಪ್ಪಾ ಅಂತಾ ಹೇಳಿ ರಿಟರ್ನ್ ಮಾಡಿಸಿದೆ ಎಂದು ಆಪರೇಷನ್ ಕಮಲ ಬಗ್ಗೆ ಆರೋಪ ಮಾಡಿದರು.

ಸಿದ್ದರಾಮಯ್ಯರನ್ನ ಹಾಡಿ ಹೊಗಳಿದ ಜಿ.ಟಿ.ದೇವೇಗೌಡ

ನಾನು ರಾಜಕೀಯ ಬೇಡ ಎಂದು ಸುಮ್ಮನೆ ಕೂತಿದ್ದೆ. 1983ರ ಅವಧಿಯಲ್ಲಿ ಮೈಸೂರಿನ ಎಪಿಎಂಸಿಗೆ ಸ್ಪರ್ಧೆ ಮಾಡಲು ಸೂಕ್ತ ವ್ಯಕ್ತಿ ಇರಲಿಲ್ಲ. ಆಗ ಸಿದ್ದರಾಮಯ್ಯ ಅವರು ಶಾಸಕರಾಗಿ ಗೆದ್ದಿದ್ರು. ಆಗ ನನ್ನ ಎಪಿಎಂಸಿಗೆ ನಿಲ್ಲಬೇಕು ಎಂದು ಸಿದ್ದರಾಮಯ್ಯ ಅವರು ನನ್ನ ನಿಲ್ಲಿಸಿದ್ರು. ರಾಜಕೀಯ ಬೇಡ ಅಂತ ಸುಮ್ಮನೆ ಇದ್ದೆ. ಸಿದ್ದರಾಮಯ್ಯ ಅವರ ಒತ್ತಾಯದಿಂದ ನಾನು ನಿಂತೆ. ಅವರು ಆಗ ಶಾಸಕರಾಗಿದ್ದ ಕಾರಣ ಎಪಿಎಂಸಿಯಲ್ಲಿ ನಾನು ಕೂಡ ಗೆದ್ದೆ. ಈ ಮೂಲಕ ನಂಗೆ ರಾಜಕೀಯ ತಿರುವು ಸಿಕ್ಕಿತು ಎಂದು ಆ ದಿನಗಳನ್ನ ನೆನಪು ಮಾಡಿಕೊಂಡರು.

ABOUT THE AUTHOR

...view details