ಕರ್ನಾಟಕ

karnataka

ETV Bharat / elections

3 ಬಾರಿ ಸಿಎಂ ಹುದ್ದೆ ಕೈ ತಪ್ಪಿದ್ರೂ ಏನೂ ಮಾತಾಡ್ಲಿಲ್ಲ... ಖರ್ಗೆ ಕೊಟ್ಟ ಕಾರಣ​ ಹೀಗಿದೆ - kannada news

ಮತದಾರಪ ಮುಂದೆ ಮನದಾಳ ಹಂಚಿಕೊಂಡ ಕಾಂಗ್ರೆಸ್ ನಾಯಕ ಖರ್ಗೆ, ಮುಖ್ಯಮಂತ್ರಿ ಹುದ್ದೆ ಮೂರು ಬಾರಿ ನನ್ನ ಕೈ ತಪ್ಪಿ ಹೋಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ

By

Published : Apr 12, 2019, 7:33 PM IST

ಕಲಬುರಗಿ: ಕೆಲ ಕಾರಣಗಳಿಂದ ನನಗೂ ಮೂರು ಸಲ ಮುಖ್ಯಮಂತ್ರಿ ಹುದ್ದೆ ಕೈತಪ್ಪಿದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಖರ್ಗೆ, ಬೇರೆ ಬೇರೆ ಕಾರಣಗಳಿಂದಾಗಿ ನನಗೂ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿದೆ. ಹಾಗಂತ ನಾನೆಂದೂ ಬಹಿರಂಗವಾಗಿ ಮಾತನಾಡಿಲ್ಲ ಎಂದು ಮನದಾಳದ ನೋವು ಹಂಚಿಕೊಂಡರು.

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ

ನನಗೆ ಪಕ್ಷ ಹಾಗು ಸಿದ್ದಾಂತಗಳು ಮುಖ್ಯವಾಗಿದ್ದವು. ಆದರೆ, ನಮ್ಮ ಪಕ್ಷದಿಂದ ಹೊರಹೋದವರು ಈಗ ಸಂವಿಧಾನ ವಿರೋಧಿ ಪಕ್ಷದಲ್ಲಿ ಕೆಲಸ ಮಾಡುತ್ತಿರುವುದು ನೋಡಿದರೆ ಅವರ ಜನಪರ ಕಾಳಜಿ ತಿಳಿಯುತ್ತದೆ ಎಂದು ಹೇಳುವುದರ ಮೂಲಕ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ನನ್ನ ಅಭಿವೃದ್ದಿ ಪರ ಕೆಲಸಗಳೇ ನನ್ನನ್ನು 11 ಬಾರಿ ಗೆಲ್ಲುವಂತೆ ಮಾಡಿದೆ. ಹಾಗಾಗಿ ಕಲಬುರಗಿಗೆ ಪ್ರಚಾರ ಸಭೆಗೆ ಬಂದಿದ್ದ ಮೋದಿ ನನ್ನ ಬಗ್ಗೆ ಮಾತನಾಡಿಲ್ಲ. ಆದರೆ, ಮೋದಿಯ ಇಲ್ಲಿನ ಮರಿಗಳು ನನ್ನ ಬಗ್ಗೆ ಮಾತನಾಡುತ್ತಿವೆ ಎಂದು ತಮ್ಮ ರಾಜಕೀಯ ಎದುರಾಳಿಗಳಿಗೆ ಟಾಂಗ್ ಕೊಟ್ಟರು.

ನನ್ನ ವಿರುದ್ಧ ನಿಂತವರು ಮೊದಲು ತಾವೇ ಸೋತು ಸುಣ್ಣವಾಗಿದ್ದಾರೆ. ಈಗ ನನ್ನನ್ನು ಸೋಲಿಸುವ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ, ಮಾಲಿಕಯ್ಯ ಗುತ್ತೆದಾರ ಹಾಗು ಎ.ಬಿ. ಮಾಲಕರೆಡ್ಡಿ ವಿರುದ್ಧ ಕುಟುಕಿದರು. ದೇಶದ ಐಕ್ಯತೆಗೆ ಬಿಜೆಪಿ ಹಾಗೂ ಆರ್ ಎಸ್ ಎಸ್ ಸಿದ್ದಾಂತಗಳು ಮಾರಕ ಎಂದಿರುವ ಖರ್ಗೆ, ಈ ಸಲದ ಚುನಾವಣೆಯಲ್ಲಿ ಅಂತಹ ಶಕ್ತಿಗಳನ್ನು ದಮನ ಮಾಡುವಂತೆ ಮತದಾರರಿಗೆ ಮನವಿ ಮಾಡಿದರು.

ABOUT THE AUTHOR

...view details