ಕರ್ನಾಟಕ

karnataka

ETV Bharat / elections

ಸಿಎಂ ರೇಂಜ್ ರೋವರ್ ಕಾರಿನಲ್ಲಿ ಬೆಂಕಿ...! : ಅಪಾಯದಿಂದ ಕುಮಾರಸ್ವಾಮಿ ಪಾರು

ಸಿಎಂ ಕುಮರಸ್ವಾಮಿಯವರ ರೇಂಜ್​ ​ ರೋವರ್ ಕಾರಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಶ್ರೀರಂಗಪಟ್ಟಣದ ಬಳಿ ನಡೆದಿದ್ದು, ಭದ್ರತಾ ಸಿಬ್ಬಂದಿಗಳ ಜಾಗರುಕತೆಯಿಂದ ಸಿಎಂರನ್ನು ಕಾರಿನಿಂದ ಇಳಿಸಿ ಬೇರೊಂದು ಕಾರಿನಲ್ಲಿ ಹೋಟೆಲ್​ಗೆ ಕಳುಹಿಸಿಕೊಟ್ಟಿದ್ದಾರೆ.

By

Published : Apr 11, 2019, 4:48 AM IST

Updated : Apr 11, 2019, 6:21 AM IST

cm car

ಬೆಂಗಳೂರು :ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ದುಬಾರಿ ವೆಚ್ಚದ ರೇಂಜ್ ರೋವರ್ ಕಾರಿನಲ್ಲಿ ಹಠಾತ್ತನೆ ಬೆಂಕಿ ಕಾಣಿಸಿಕೊಂಡಿದ್ದು ಸಿಎಂಅಪಾಯದಿಂದ ಪಾರಾಗಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಪೀಹಳ್ಳಿ ಬಳಿ ಬುಧವಾರ ರಾತ್ರಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಪರ ಲೋಕಸಭೆ ಚುನಾವಣೆ ಪ್ರಚಾರ ಮುಗಿಸಿಕೊಂಡು ಕೆಆರ್​ಎಸ್​ನ​ ಖಾಸಗಿ ಹೋಟೆಲ್​ನಲ್ಲಿ ತಂಗಲು ತೆರಳುತ್ತಿದ್ದಾಗ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಕಾರಿನಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿದ ಮುಖ್ಯಮಂತ್ರಿಗಳ ಭದ್ರತಾ ಸಿಬ್ಬಂದಿ ಕುಮಾರಸ್ವಾಮಿ ಅವರನ್ನು ಕಾರಿನಿಂದ ಕೆಳಗಿಳಿಸಿ ಬೇರೊಂದು ಕಾರಿನಲ್ಲಿ ಹೋಟೆಲ್​ಗೆ ಕಳಿಸಿಕೊಟ್ಟಿದ್ದಾರೆ.

ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಾಗ ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿದ್ದು ಮುಖ್ಯಮಂತ್ತಿಗಳು ಸಹ ಒಂದು ಕ್ಷಣ ಗಾಬರಿಗೊಂಡಿದ್ದರು. ರೇಂಜ್ ರೋವರ್ ಕಾರು ಹೆಚ್ಚು ಓಡಾಡಿದ ಕಾರಣ ಎಂಜಿನ್ ಬಿಸಿಯಾಗಿ ಹೊಗೆ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿರಬಹುದು ಎನ್ನಲಾಗಿದೆ.

ಮುಖ್ಯಮಂತ್ರಿಗಳ ಭದ್ರತಾ ಸಿಬ್ಬಂದಿ ತಕ್ಷಣ ಕಾರನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದನ್ನ ಗಮನಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಲಿಲ್ಲ. ಭದ್ರತಾ ಸಿಬ್ಬಂದಿ ಹಾಗು ಸ್ಥಳೀಯರು ಕಾರಿನಲ್ಲಿನ ಬೆಂಕಿಯನ್ನ ನಂದಿಸಿದ್ದಾರೆ.

Last Updated : Apr 11, 2019, 6:21 AM IST

ABOUT THE AUTHOR

...view details