ಬೆಂಗಳೂರು : ನಗರದಲ್ಲಿ ಯುಗಾದಿ ಹಬ್ಬದ ದಿನದಂದು ಡಾ.ವಿಷ್ಣು ಸೇನಾ ಸಮಿತಿಯ ಸದಸ್ಯರು, ಮತ್ತೊಮ್ಮೆ ಮೋದಿ ಪ್ರಧಾನ ಮಂತ್ರಿಯಾಗಬೇಕೆಂದು ಕೋರಿ ಚುನಾವಣಾ ಪ್ರಚಾರ ಕೈಗೊಂಡರು.
ಡಾ. ವಿಷ್ಣು ಸೇನಾ ಸಮಿತಿಯಿಂದ ಮೋದಿ ಪರ ಪ್ರಚಾರ - kannada news
ರಾಜ್ಯದಲ್ಲಿ ಯುವಕರಿಂದ ಹಿಡಿದು ಕೆಲ ಸಂಘ ಸಂಸ್ಥೆಗಳು ಮೋದಿ ಪರ ಪ್ರಚಾರ ಮಾಡುತ್ತಿದ್ದಾರೆ. ನೆಲಮಂಗಲದಲ್ಲಿ ಅಂತೆಯೇ ಡಾ.ವಿಷ್ಣು ಸೇನಾ ಸಮಿತಿಯ ಸದಸ್ಯರು ಬಿಜೆಪಿ ಪರ ಮತಯಾಚಿಸಿದರು.
ಡಾ.ವಿಷ್ಣು ಸೇನಾ ಸಮಿತಿಯಿಂದ ಮೋದಿ ಪರ ಪ್ರಚಾರ
ನೆಲಮಂಗಲ ತಾಲೂಕಿನ ನರಸೀಪುರ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಡಾ. ವಿಷ್ಣು ಸೇನಾ ಸಮಿತಿಯ ಪದಾಧಿಕಾರಿಗಳು ಸೇರಿ ಮೋದಿ ಪರ ಪ್ರಚಾರ ನಡೆಸಿದ್ದಾರೆ. ಗ್ರಾಮದ ಮನೆ ಮನೆಗಳಿಗೆ ತೆರಳಿ ಸಾರ್ವಜನಿಕರಲ್ಲಿ ನರೇಂದ್ರ ಮೋದಿಯ ಸಾಧನೆಗಳನ್ನು ತಿಳಿಸುತ್ತಾ ಮತಯಾಚಿಸಿದರು.
ಯುಗಾದಿ ದಿನ ಬೇವು-ಬೆಲ್ಲ ತಿಂದು ಹಬ್ಬದಾಚರಣೆಗೆ ಸೀಮಿತವಾಗಿರದೇ ದೇಶದ ಒಳಿತಿಗಾಗಿ ಬಿಜೆಪಿಯನ್ನು ಅಧಿಕಾರ ತರಬೇಕೆಂದು ಮನವಿ ಮಾಡುತ್ತಿದ್ದೇವೆ. ಹಲವಾರು ಊರಿನ ಯುವಕರ ಜೊತೆ ಸೇರಿ ಹಬ್ಬದ ಭಾಗವಾಗಿ ಪ್ರಚಾರ ಕೈಗೊಂಡಿದ್ದೇವೆ. ನಾವೆಲ್ಲರೂ ಒಗ್ಗಟ್ಟಿನಿಂದ ಪ್ರಚಾರ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
Last Updated : Apr 7, 2019, 7:33 PM IST