ಹುಬ್ಬಳ್ಳಿ:ಇತ್ತೀಚೆಗೆ ನಿಧನರಾದ ಸಚಿವ ಸಿ.ಎಸ್ ಶಿವಳ್ಳಿ ಅವರಿಂದ ತೆರವಾದ ಶಾಸಕ ಸ್ಥಾನಕ್ಕೆ ನಡೆಯುತ್ತಿರುವ ಕುಂದಗೋಳ ವಿಧಾನಸಭೆ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಶಿವಳ್ಳಿ ಪತ್ನಿ ಕುಸುಮಾ ಶಿವಳ್ಳಿ ಹಾಗೂ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ್ ಪ್ರಚಾರ ನಡೆಸಿದರು.
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ದೇವರಗುಡಿಹಾಳ, ಪಶುಪತಿಹಾಳ ಗ್ರಾಮದಲ್ಲಿನ ಮತದಾರರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಸಾಥ್ ನೀಡಿದರು.
ಮೈತ್ರಿ, ಕಮಲ ಅಭ್ಯರ್ಥಿಗಳ ಪ್ರಚಾರ ಮತ್ತೊಂದು ಕಡೆ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ್ ಕೂಡ ಭರ್ಜರಿ ಮತಯಾಚನೆ ನಡೆಸಿದರು. ಕಡಪಟ್ಟಿ, ಅಲ್ಲಾಪುರ, ಗುಡೇನಕಟ್ಟಿ, ಎರೆನಾರಾಯಣಪುರದಲ್ಲಿ ಪಾದಯಾತ್ರೆ ಮೂಲಕ ಮತಯಾಚಿಸಿದರು.
ವಿಧಾನಸಭೆಯಲ್ಲಿ ತನ್ನ ಸಂಖ್ಯಾಬಲ ಉಳಿಸಿಕೊಳ್ಳಬೇಕಾದರೇ ಕಾಂಗ್ರೆಸ್ಗೆ ಗೆಲ್ಲುವ ಅನಿವಾರ್ಯತೆ ಇದೆ. ಕಾಂಗ್ರೆಸ್ಗೆ ಇದು ಪ್ರತಿಷ್ಠೆಯ ಕದನವಾಗಿದ್ದು, ಶಿವಳ್ಳಿ ನಿಧನದ ಅನುಕಂಪದ ಅಲೆ ಕಾಂಗ್ರೆಸ್ಗೆ ಇದೆ. ಜೊತೆಗೆ ಜೆಡಿಎಸ್ ಮತಗಳು ಕಾಂಗ್ರೆಸ್ ಪಾಲಾಗುತ್ತವೆ, 2018ರ ಚುನಾವಣೆಯಲ್ಲಿ ಬಿಜೆಪಿ ಕೇವಲ 600 ಮತಗಳ ಅಂತರದಿಂದ ಸೋತಿತ್ತು.