ಶಿವಮೊಗ್ಗ: ಅರವತ್ತಕ್ಕೂ ಹೆಚ್ಚು ವರ್ಷಗಳ ಕಾಲ ದೇಶದ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಕುಟುಂಬ ರಾಜಕಾರಣ ಮಾಡಿದೆ ಹೊರೆತು ದೇಶದ ಅಭಿವೃದ್ಧಿ ಮಾಡಲಿಲ್ಲ ಎಂದು ಲೋಕಸಭಾ ಅಭ್ಯರ್ಥಿ ಬಿ.ವೈ ರಾಘವೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಭದ್ರಾವತಿಯಲ್ಲಿ ನಡೆದ ಸ್ನೇಹ ಮಿಲನ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಲೋಕಸಭಾ ಅಭ್ಯರ್ಥಿ ಬಿ.ವೈ ರಾಘವೇಂದ್ರ , ಸ್ವತಂತ್ರ ಬಂದು 73 ವರ್ಷದಲ್ಲಿ 60ಕ್ಕೂ ಹೆಚ್ಚು ವರ್ಷಗಳಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದೆ. ಇವರ ಆಡಳಿತಕ್ಕೂ, ಮಧ್ಯೆ ಕೇವಲ 10 ವರ್ಷ ಆಡಳಿತ ನಡೆಸಿರುವ ವಾಜಪೇಯಿ ಹಾಗೂ ಮೋದಿಜಿ ಅವರ ಆಡಳಿತದ ಬಗ್ಗೆ ತುಲನೆ ಮಾಡಿ ನೋಡಿ ಬಿಜೆಪಿಗೆ ಮತ ನೀಡಿ ಎಂದು ಕೇಳಿಕೊಂಡರು.
ಮೋದಿ ನೇತೃತ್ವದ ಸರ್ಕಾರ ಕಳೆದ 5 ವರ್ಷಗಳಲ್ಲಿ 130ಕ್ಕೂ ಹೆಚ್ಚು ಯೋಜನೆಗಳನ್ನು ಮೋದಿ ಸರ್ಕಾರ ಜಾರಿಗೆ ತಂದಿದೆ. ದೇಶದ ಜನತೆಗೆ ಬೇಕಾದ ಎಲ್ಲಾ ರೀತಿಯ ಯೋಜನೆ ಗಳನ್ನ ಜಾರಿಗೆ ತರುವ ಮೂಲಕ ಎಲ್ಲಾ ವರ್ಗದ ಜನರಿಗೆ ಅನೂಕೂಲ ಮಾಡಿಕೊಟ್ಟಿದೆ. ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕಿಂತ ದೇಶ ದೊಡ್ಡದು ಎನ್ನುವ ನಿಟ್ಟಿನಲ್ಲಿ ಇಡಿ ದೇಶವೇ ನನ್ನ ಕುಟುಂಬ ಎಂದುಕೊಂಡಿರುವ ಮೋದಿ ನೇತೃತ್ವದ ಸರ್ಕಾರವನ್ನ ಬೆಂಬಲಿಸಲು ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಲು ಮತ್ತೊಮ್ಮೆ ಅವಕಾಶ ಮಾಡಿಕೊಡಿ ಎಂದು ಮತಯಾಚಿಸಿದರು.
ನನ್ನ ಕಾಲಾವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಗೆ ಶ್ರಮಿಸುವ ಮೂಲಕ ಅನೇಕ ಯೋಜನೆಗಳನ್ನ ಜಿಲ್ಲೆಗೆ ತಂದು ಅಭಿವೃದ್ಧಿಯತ್ತ ತಂದಿದ್ದೇನೆ . ಹಾಗಾಗಿ ಈ ಭಾರಿ ಮತ್ತೊಮ್ಮೆ ಅವಕಾಶ ಮಾಡಿಕೋಡುವ ಮೂಲಕ ಆಶಿರ್ವಾದ ಮಾಡಿ ಎಂದು ಮನವಿ ಮಾಡಿಕೊಂಡರು.