ಪಶ್ಚಿಮ ಬಂಗಾಲ:ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ವ್ಯಕ್ತಿಯೊಬ್ಬ ಮೃತಪಡ್ತಿದ್ದಂತೆ,ಕಿಡಿಗೇಡಿಗಳು ಮತಗಟ್ಟೆಯ ಸಮೀಪ ಬಾಂಬ್ ಎಸೆದು ಪರಾರಿಯಾಗಿದ್ದಾರೆ.
ಪಶ್ಚಿಮಬಂಗಾಲದಲ್ಲಿ ಹಿಂಸಾಚಾರ, ಮತಗಟ್ಟೆ ಸಮೀಪ ಬಾಂಬ್ ಎಸೆದ ಕಿಡಿಗೇಡಿಗಳು! - ದೀದಿ ನಾಡು
ದೀದಿ ನಾಡಲ್ಲಿ ಲೋಕಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. ಇದರ ಜೊತೆ ಜೊತೆಗೇನೇ ಹಿಂಸಾಚಾರವೂ ತಾರಕಕ್ಕೇರುತ್ತಿದೆ.
ಬಂಗಾಲದಲ್ಲಿ ಹಿಂಸಾಚಾರ
ಇಲ್ಲಿನ ಮುರ್ಷಿದಾಬಾದ್‌ನ ರಾಣಿನಗರದಲ್ಲಿರುವ ಮತಗಟ್ಟೆ ವ್ಯಾಪ್ತಿಯಲ್ಲಿ ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ಎಸಗಿರುವ ದೃಶ್ಯವಿದೆ. ಮತಗಟ್ಟೆ ಸಮೀಪ ಬಾಂಬ್ ಎಸೆದ ವ್ಯಕ್ತಿಯೊಬ್ಬನ ಜೊತೆ, ನಾಲ್ಕೈದು ಮಂದಿ ಓಡಿ ಹೋಗುತ್ತಿರುವುದು ಕಂಡುಬಂದಿದೆ.
ಇದಕ್ಕೂ ಮುನ್ನ, ಇದೇ ಮುರ್ಷಿದಾಬಾದ್‌ನ ಬಲಿಗ್ರಾಮ್‌ನಲ್ಲಿ ಮತದಾನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ 'ಕೈ' ಮತ್ತು ಟಿಎಂಸಿ ಘರ್ಷಣೆಗೆ ಬಲಿಯಾಗಿದ್ದ.
Last Updated : Apr 23, 2019, 4:26 PM IST